ಮಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ನಗರದ ಹೊರವಲಯದ ತಲಪಾಡಿ ಸಮೀಪದ ಕೆಸಿರೋಡು-ಕೊಮರಂಗಲ ನಿವಾಸಿ, ಬಸ್ ಚಾಲಕ ಹನೀಫ್ ಎಂಬವರ ಪುತ್ರ ಆಕಿಫ್ (12) ಎಂಬ ಬಾಲಕನನ್ನು ಆತನ ಸ್ನೇಹಿತನೇ ಪಬ್ಜಿ ಆಟಕ್ಕೆ ಸೋಲಿನ ದ್ವೇಷಕ್ಕಾಗಿ ಕೊಲೆ ಮಾಡಿದ ಪ್ರಕರಣ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಟಿದ್ದ ಬಾಲಕ ಆಕಿಫ್ ತಡ ರಾತ್ರಿಯಾದರೂ ಮರಳಿ ಬಾರದ ಹಿನ್ನಲೆಯಲ್ಲಿ ಮನೆ ಮಂದಿ ತೀವ್ರ ಹುಟುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಕೆಸಿ ನಗರದ ಫಲಾಹ್ ಸ್ಕೂಲ್ ಬಳಿ ಬಾಲಕನ ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಲ್ಲಿನ ಫಲಾಹ್ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿರುವ ಆಕಿಫ್ ಶನಿವಾರ ರಾತ್ರಿ 9 ಗಂಟೆಯ ವೇಳೆಗೆ ಸ್ನೇಹಿತ ದೀಪಕ್ ಮೊಬೈಲ್ ಕರೆ ಮಾಡಿದ ಹಿನ್ನಲೆಯಲ್ಲಿ ಮನೆಯಿಂದ ಹೊರಟಿದ್ದನು. ಘಟನೆಯ ವಿಷಯ ತಿಳಿಯುತ್ತಲೇ ತಕ್ಷಣ ಭಾನುವಾರ ಬೆಳಿಗ್ಗೆಯೇ ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸ್ವತಃ ತನಿಖೆ ಕೈಗೆತ್ತಿಕೊಂಡಿದ್ದು, ಘಟನೆಯನ್ನು ಬೇಧಿಸಿದ್ದಾರೆ.
ಬಾಲಕನ ಮೃತದೇಹ ಪತ್ತೆಯಾಗುತ್ತಲೇ ಮನೆ ಮಂದಿಯ ಅನುಮಾನದ ಮೇರೆಗೆ ಆಕಿಫ್ ಜೊತೆಗೆ ಪಬ್ಜಿ ಆಡುತ್ತಿದ್ದ ಉತ್ತರ ಪ್ರದೇಶ ಮೂಲದ ಸದ್ಯ ಕೆಸಿರೋಡಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ದೀಪಕ್ ಎಂಬ ಹುಡುಗನ ಮನೆಗೆ ಬಂದು ವಿಚಾರಿಸಿದ್ದು ಆತ ದಾರಿ ತಪ್ಪಿಸುವ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಆತನನ್ನು ವಿಚಾರಿಸಿದಾಗ ಸತ್ಯಾಂಶ ಬಾಯಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಆಕಿಫ್ ನನ್ನು ತಾನು ನೇರವಾಗಿ ಪಬ್ ಜಿ ಆಡಲು ಕರೆದಿದ್ದೆ. ಎಂಟು ಗಂಟೆಗೆ ಬಂದಿದ್ದ ಆತ ಆಟದಲ್ಲಿ ಸೋತು 8.15 ಕ್ಕೆ ಮನೆಗೆ ತೆರಳಿದ್ದಾಗಿ ಹೇಳಿದ್ದಾನೆ. ಅನುಮಾನಗೊಂಡ ಸ್ಥಳೀಯರು ಫಲಾಹ್ ಶಾಲೆಯ ಮೈದಾನದಲ್ಲಿ ಆರೋಪಿಯ ಮನೆ ಹತ್ತಿರ ಹುಡುಕಿದ್ದಾರೆ. ಆಗ ಹುಡುಗನ ಚಪ್ಪಲಿ ದೊರಕಿದ್ದು ಪೆÇಲೀಸರು ಆರೋಪಿ ಪಿಯುಸಿ ಓದುತ್ತಿದ್ದ ಹುಡುಗನನ್ನ ವಶಕ್ಕೆ ತೆಗೆದು ವಿಚಾರಿಸಿದ್ದಾರೆ.
ಪೆÇಲೀಸರ ವಿಚಾರಣೆಯಲ್ಲಿ ಆರೋಪಿ ಬಾಲಕ ಸತ್ಯಾಂಶ ಹೇಳಿದ್ದಾನೆ. ಮೂರು ತಿಂಗಳ ಹಿಂದಷ್ಟೆ ಆಕಿಫ್‍ಗೆ ಮೊಬೈಲ್ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಪ್ರಥಮ ಪಿಯು ಕಲಿಯುತ್ತಿದ್ದ ದೀಪಕ್ ಎನ್ನುವ ವಿದ್ಯಾರ್ಥಿಯ ಪರಿಚಯವಾಗಿತ್ತು. ಸ್ಥಳೀಯವಾಗಿ ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್‍ಗಳಲ್ಲಿ ಸಕ್ರಿಯನಾಗಿದ್ದ ದೀಪಕ್ ಬಳಿಕ ಆನ್ ಲೈನಲ್ಲಿ ಆಕಿಫ್ ಜೊತೆಗೆ ಪಬ್ಜಿ ಆಟ ಆಡುತ್ತಿದ್ದ. ಆದರೆ, ಆಟದಲ್ಲಿ ಆಕಿಫ್ ಪಿಯು ವಿದ್ಯಾರ್ಥಿಯನ್ನು ನಿರಂತರವಾಗಿ ಸೋಲಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ದ್ವೇಷ ಬೆಳೆದಿದ್ದು, ನೀನು ಬೇರೆ ಯಾರದೋ ಕೈಯಲ್ಲಿ ಮೊಬೈಲ್ ನೀಡಿ ನನ್ನನ್ನು ಸೋಲಿಸುತ್ತಿದ್ದೀಯ. ಸಾಧ್ಯವಾದರೆ ನೇರವಾಗಿ ಆಟಕ್ಕೆ ಬಾ ಎಂದು ಶನಿವಾರ ರಾತ್ರಿ 9 ಗಂಟೆಗೆ ಆಕಿಫ್ ನನ್ನು ಕರೆದಿದ್ದ. ಸವಾಲು ಸ್ವೀಕರಿಸಿದ ಆಕಿಫ್, ಆರೋಪಿ ಬಾಲಕನ ಜೊತೆ ಫಲಾಹ್ ಶಾಲೆಯ ಬಳಿಗೆ ತೆರಳಿದ್ದ. ಅಲ್ಲಿ ಇಬ್ಬರೂ ಆಟವಾಡಿದ್ದು ಎದುರೆದುರು ನಿಂತು ಆಟವಾಡಿದಾಗ ಆಕಿಫ್ ಸೋತಿದ್ದಾನೆ.
ಬಾಲಕ ಆಕಿಫ್ ಆಟದಲ್ಲಿ ಸೋತಿದ್ದನ್ನು ನೋಡಿ, ದೀಪಕ್ ಹೀಯಾಳಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು ತಳ್ಳಾಟ ನಡೆದಿದೆ. ಆರೋಪಿ ಹುಡುಗನನ್ನ ಆಕಿಫ್ ತಳ್ಳಿ ಕಲ್ಲು ಎಸೆದಿದ್ದಾನೆ. ಇದರಿಂದ ಸಿಟ್ಟಾದ ಆರೋಪಿ ಹುಡುಗ ತಿರುಗಿ ಕಲ್ಲು ಎಸೆದಿದ್ದು ಆಕಿಫ್ ತಲೆ, ಮುಖಕ್ಕೆ ಬಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿದ ಆರೋಪಿ ಬಾಲಕ ಮೃತದೇಹವನ್ನು ಕಾಂಪೌಂಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ವಾಪಾಸು ಮನೆಗೆ ಹಿಂತಿರುಗಿದ್ದ ಎಂಬುದಾಗಿ ದೀಪಕ್ ಮಾಹಿತಿ ನೀಡಿದ್ದಾನೆ ಎಂದು ನಗರ ಪೆÇಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಆರೋಪಿ ಬಾಲಕ ದೀಪಕ್ ಉತ್ತರ ಪ್ರದೇಶ ಮೂಲದವನಾಗಿದ್ದು, ಆತನ ತಂದೆ ಸಂತೋಷ್ ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು, ಕಳೆದ 8 ವರ್ಷಗಳಿಂದ ಕೆ.ಸಿ.ನಗರದ ಲತೀಫ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
0 comments:
Post a Comment