ಮಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ತಲಪಾಡಿ ಗ್ರಾಮದ ಕೊಮರಂಗಲ ನಿವಾಸಿ, ಬಸ್ ಚಾಲಕ ಹನೀಫ್ ಅವರ 12 ವರ್ಷದ ಪುತ್ರ, ಕೆ.ಸಿ.ನಗರ ಅಲ್-ಫಲಾಹ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಕಿಫ್ ಎಂಬ ಬಾಲಕನ ಕೊಲೆ ಬಗ್ಗೆ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರು ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಾಲಕನ ಕೊಲೆಯ ಬಗ್ಗೆ ವಿವಿಧ ಸಂಶಯಗಳು ಸೃಷ್ಟಿಯಾಗಿದ್ದು, ಕೊಲೆಯ ಮೂಲವನ್ನು ಕೆದಕಿದಾಗ ಪಬ್ ಜಿ ಆನ್ ಲೈನ್ ಆಟದಲ್ಲಿ ಕೊಲೆಯಾದ ಯುವಕ ಎದುರಾಳಿಯನ್ನು ಸತತವಾಗಿ ಸೋಲಿಸುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ. ಈ ಬಗ್ಗೆ ಪೆÇಲೀಸ್ ಇಲಾಖೆ ಈಗಾಗಲೆ ಒಬ್ಬನನ್ನು ಬಂಧಿಸಿದ್ದು, ದಕ್ಷ ಅಧಿಕಾರಿಯಾಗಿರುವ ಮಂಗಳೂರು ಕಮಿಷನರ್ ಈಗಾಗಲೆ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿರವ ಕಾರ್ಯ ವೈಖರಿಯಲ್ಲಿ ನಮಗೆ ವಿಶ್ವಾಸವಿದೆ. ಆದುದರಿಂದ ಕೂಡಲೆ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಸಮಗ್ರ ತನಿಖೆ ನಡೆಸಿ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಅವರು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಮೃತ ಬಾಲಕನ ಕುಟುಂಬಕ್ಕೆ ಸರ್ವ ರೀತಿಯ ಸಂತಾಪ ವ್ಯಕ್ತಪಡಿಸಿದ ಅಬೂಬಕ್ಕರ್ ಅವರು ಬಾಲಕನ ಹೆತ್ತವರಿಗೂ ಕುಟುಂಬಕ್ಕೂ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಹೇಳಿಕೆಯಲ್ಲಿ ಪ್ರಾರ್ಥಿಸಿದ್ದಾರೆ.
0 comments:
Post a Comment