ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಹೈದರಾಬಾದಿಗೆ 9 ವಿಕೆಟ್‍ಗಳ ಜಯ - Karavali Times ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಹೈದರಾಬಾದಿಗೆ 9 ವಿಕೆಟ್‍ಗಳ ಜಯ - Karavali Times

728x90

21 April 2021

ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಹೈದರಾಬಾದಿಗೆ 9 ವಿಕೆಟ್‍ಗಳ ಜಯ


ಚೆನ್ನೈ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಬುಧವಾರ ಸಂಜೆ ನಡೆದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ಕಿಂಗ್ ಇಲೆವೆನ್ ಪಂಜಾಜ್ ವಿರುದ್ದ 9 ವಿಕೆಟ್‍ಗಳಿಂದ ಜಯಿಸುವ ಮೂಲಕ ಕೂಟದಲ್ಲಿ ಮೊದಲ ಜಯ ದಾಖಲಿಸಿದೆ. 


    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಇನ್ನಿಂಗ್ಸಿನ 2 ಎಸೆತಗಳು ಉಳಿದಿರುತ್ತಲೇ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 120 ರನ್ ಕಲೆ ಹಾಕಿತು. ಸುಲಭ ಗುರಿ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್, 8 ಎಸೆತಗಳು ಬಾಕಿ ಇರುತ್ತಲೇ 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 9 ವಿಕೆಟ್‍ಗಳ ಭರ್ಜರಿ ವಿಜಯ ಸಾಧಿಸಿತು. 


    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‍ಸ್ಟೋವ್, ತಾಳ್ಮೆಯ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ವಾರ್ನರ್ 37 ರನ್ (37 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟಾದರು. ಜಾನಿ ಬೈರ್‍ಸ್ಟೋವ್ ಅಜೇಯ 63 ರನ್ (56 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿದರೆ, ಕೇನ್ ವಿಲಿಯಮ್ಸನ್ 16 ರನ್ (19 ಎಸೆತ) ಭಾರಿಸಿದರು. 


    ಖಲೀಲ್ ಅಹ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, 4 ಓವರ್ ಎಸೆದು 21 ರನ್ ನೀಡಿ, 3 ಪ್ರಮುಖ ವಿಕೆಟ್‍ಗಳನ್ನು ಪಡೆದು ಪಂಜಾಬ್ ತಂಡವನ್ನು ಕಟ್ಟಿ ಹಾಕಿದರು. ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಕೆ.ಎಲ್. ರಾಹುಲ್ ಕೇವಲ 4 ರನ್ ಗಳಿಸಿದರೆ, ಮಾಯಾಂಕ್ ಅಗರ್ವಾಲ್ 22 (25 ಎಸೆತ, 2 ಬೌಂಡರಿ) ಮಾತ್ರ ಗಳಿಸಲು ಶಕ್ತರಾದರು. ನಿಕೋಲಸ್ ಪೂರನ್ ಶೂನ್ಯ ಸುತ್ತಿದರು. ಕ್ರಿಸ್ ಗೇಲ್ 15 ರನ್ (17 ಎಸೆತ, 2 ಬೌಂಡರಿ) ಅಲ್ಪಮೊತ್ತಕ್ಕೆ ಔಟಾದರು. ಶಾರುಖ್ ಖಾನ್  22 ರನ್ (17 ಎಸೆತ, 2 ಸಿಕ್ಸ್) ಸಿಡಿಸಿ ಔಟಾದರು. ದೀಪಕ್ ಹೂಡ 13 ರನ್ (11 ಎಸೆತ, 2 ಬೌಂಡರಿ) ಮೊಯ್ಸೆಸ್ ಹೆನ್ರಿಕ್ಸ್ 14 ರನ್ (17 ಎಸೆತ), ಫೇಬಿಯೆನ್ ಆಲೆನ್ 6 ರನ್ (11 ಎಸೆತ), ಮುರುಗನ್ ಅಶ್ವಿನ್ 9 ರನ್ (10 ಎಸೆತ, 1 ಬೌಂಡರಿ), ಮೊಹಮ್ಮದ್ ಶಮಿ 3 ರನ್ (3 ಎಸೆತ) ಬಾರಿಸಿ ಔಟಾದರು.

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಹೈದರಾಬಾದಿಗೆ 9 ವಿಕೆಟ್‍ಗಳ ಜಯ Rating: 5 Reviewed By: karavali Times
Scroll to Top