ಐಪಿಎಲ್ ಸೀಸನ್-14 : ಮುಂಬೈ ವಿರುದ್ದ ಪಂಜಾಬಿಗೆ 9 ವಿಕೆಟ್ ಗೆಲುವು - Karavali Times ಐಪಿಎಲ್ ಸೀಸನ್-14 : ಮುಂಬೈ ವಿರುದ್ದ ಪಂಜಾಬಿಗೆ 9 ವಿಕೆಟ್ ಗೆಲುವು - Karavali Times

728x90

23 April 2021

ಐಪಿಎಲ್ ಸೀಸನ್-14 : ಮುಂಬೈ ವಿರುದ್ದ ಪಂಜಾಬಿಗೆ 9 ವಿಕೆಟ್ ಗೆಲುವು

ಚೆನ್ನೈ, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 9 ವಿಕೆಟ್‍ಗಳ ಅಮೋಘ ಗೆಲುವು ದಾಖಲಿಸಿದೆ. 


    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು 131 ರನ್‍ಗóಳಷ್ಟೆ ಗಳಿಸಲು ಶಕ್ತವಾಯಿತು. ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 17.4 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಜಯ ಸಾಧಿಸಿತು. 


    ಆರಂಭಿಕ ಆಟಗಾರದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 53 ರನ್‍ಗಳ ಜೊತೆಯಾಟವಾಡಿದರು. ಅಗರವಾಲ್ 25 ರನ್ (20 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರಿಸಿ ಔಟಾದರೆ, ಬಳಿಕ ಜತೆಗೂಡಿದ ರಾಹುಲ್-ಕ್ರಿಸ್ ಗೇಲ್ ಜೋಡಿ ಮುರಿಯದ ಎರಡನೇ ವಿಕೆಟಿಗೆ 65 ಎಸೆತಗಳಲ್ಲಿ 79 ರನ್ ಒಟ್ಟುಗೂಡಿಸಿ ತಂಡಕ್ಕೆ ನಿರಾಯಾಸ ಜಯ ತಂದುಕೊಟ್ಟರು. 


    ಕೆ.ಎಲ್. ರಾಹುಲ್ ಅಜೇಯ 60 ರನ್ (52 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಕ್ರಿಸ್ ಗೇಲ್ ಅಜೇಯ 43 ರನ್ (35 ಎಸೆತ, 5 ಬೌಂಡರಿ, 2 ಸಿಕ್ಸರ್) ಭಾರಿಸಿದರು. ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ 5ನೇ ಹಾಗೂ ಮುಂಬೈ 4ನೇ ಸ್ಥಾನದಲ್ಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಸೀಸನ್-14 : ಮುಂಬೈ ವಿರುದ್ದ ಪಂಜಾಬಿಗೆ 9 ವಿಕೆಟ್ ಗೆಲುವು Rating: 5 Reviewed By: karavali Times
Scroll to Top