ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಕೆಕೆಆರ್ ಗೆ ಸುಲಭ ಜಯ - Karavali Times ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಕೆಕೆಆರ್ ಗೆ ಸುಲಭ ಜಯ - Karavali Times

728x90

27 April 2021

ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಕೆಕೆಆರ್ ಗೆ ಸುಲಭ ಜಯ

ಅಹಮದಾಬಾದ್, ಎಪ್ರಿಲ್ 27, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ 5 ವಿಕೆಟ್‍ಗಳ ಸುಲಭ ಗೆಲುವು ಸಾಧಿಸಿದೆ. 

124 ರನ್‍ಗಳ ಸುಲಭ ಗುರಿ ಪಡೆದ ಕೆಕೆಆರ್ 16.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಭಾರಿಸಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೋಲ್ಕತ್ತಾ ಇದೀಗ 4 ಅಂಕದೊಂದಿಗೆ 5ನೇ ಸ್ಥಾನಕ್ಕೆ ಬಂದಿದೆ. 5ನೇ ಸ್ಥಾನದಲ್ಲಿದ್ದ ಪಂಜಾಬ್ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. 

17 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ನಾಯಕ ಇಯಾನ್ ಮಾರ್ಗನ್ (ಅಜೇಯ 47 ರನ್, 40 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ರಾಹುಲ್ ತ್ರಿಪಾಠಿ (41 ರನ್, 32 ಎಸೆತ, 7 ಬೌಂಡರಿ) ಅವರು 48 ಎಸೆತಗಳಲ್ಲಿ 66 ರನ್ ಜೊತೆಯಾಟವಾಡಿದ ಪರಿಣಾಮ ತಂಡ ಚೇತರಿಕೆ ಪ್ರದರ್ಶನ ನೀಡಿತು. ಅಂಡ್ರೆ ರಸಲ್ 10 ರನ್, ದಿನೇಶ್ ಕಾರ್ತಿಕ್ ಔಟಾಗದೇ 12 ರನ್ (6 ಎಸೆತ, 2 ಬೌಂಡರಿ) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪಂಜಾಬ್ ಪರ ಕೆ.ಎಲ್. ರಾಹುಲ್ 19 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಮಾಯಾಂಕ್ ಅಗರವಾಲ್ 31 ರನ್ (34 ಎಸೆತ, 1 ಬೌಂಡರಿ, 2 ಸಿಕ್ಸರ್) ಬಾರಿಸಿದರು. 

ಕ್ರಿಸ್ ಗೇಲ್ ಶೂನ್ಯ ಸಂಪಾದಿಸಿದರು. ದೀಪಕ್ ಹೂಡಾ 1 ರನ್ ಮಾತ್ರ ಗಳಿಸುವಲ್ಲಿ ಶಕ್ತರಾದರು. ಕೊನೆಯಲ್ಲಿ ಕ್ರಿಸ್ ಜೋರ್ಡನ್ 30 ರನ್ (18 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.

ಕೋಲ್ಕತ್ತಾ ಪರ ಪ್ರಸಿದ್ಧ್ ಕೃಷ್ಣ 4 ಓವರ್ ಎಸೆದು 30 ರನ್ ನೀಡಿ 3 ವಿಕೆಟ್ ಕಿತ್ತರೆ, ಪ್ಯಾಟ್ ಕಮ್ಮಿನ್ಸ್ ಮತ್ತು ಸುನೀಲ್ ನರೇನ್ ತಲಾ 2 ವಿಕೆಟ್ ಪಡೆದರು. ಶಿವಂ ಮಾವಿ ಮತ್ತು ರೆಸೆಲ್ ತಲಾ 1 ವಿಕೆಟ್ ಕಬಳಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಸೀಸನ್-14 : ಪಂಜಾಬ್ ವಿರುದ್ದ ಕೆಕೆಆರ್ ಗೆ ಸುಲಭ ಜಯ Rating: 5 Reviewed By: karavali Times
Scroll to Top