ಚೆನ್ನೈ, ಎಪ್ರಿಲ್ 21, 2021 (ಕರಾವಳಿ ಟೈಮ್ಸ್) : ಕೊನೆವರೆಗೂ ರೋಚಕ ಹಣಾಹಣಿಯಲ್ಲಿ ಸಾಗಿ ಬಂದ ಪಂದ್ಯದಲ್ಲಿ ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವಿರುದ್ದ 6 ವಿಕೆಟ್‍ಗಳ ಅರ್ಹ ಜಯವನ್ನು ಪಡೆದುಕೊಂಡಿದೆ.
ಐಪಿಎಲ್ 14ನೇ ಆವೃತ್ತಿಯ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಭಾರೀ ಮೊತ್ತದ ಮುನ್ಸೂಚನೆ ನೀಡಿತ್ತಾದರೂ ಬಳಿ ಹಠಾತ್ ಬೆಳವಣಿಗೆಯಲ್ಲಿ ಕುಸಿತ ಕಂಡು ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್‍ಗಳಷ್ಟೆ ಗಳಿಸಲು ಶಕ್ತವಾಯಿತು. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (24ಕ್ಕೆ 4) ಅವರ ಮಾರಕ ಸ್ಪಿನ್ ದಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಸಂಪೂರ್ಣವಾಗಿ ಕಟ್ಟಿ ಹಾಕಿತು.
138 ರನ್‍ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಇನ್ನೂ 5 ಎಸೆತ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ ಗೆಲುವು ಪಡೆದುಕೊಂಡಿದೆ. ಡೆಲ್ಲಿ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪೃಥ್ವಿ ಶಾ 7 ರನ್ (5 ಎಸೆತ, 1 ಬೌಂಡರಿ) ಹಾಗೂ ಸ್ಟೀವ್ ಸ್ಮಿತ್ 33 ರನ್ (29 ಎಸೆತ, 4 ಬೌಂಡರಿ) ಸಿಡಿಸಿ ತ್ವರಿತವಾಗಿ ವಿಕೆಟ್ ಒಪ್ಪಿಸಿದರು.
ಲೋ ಸ್ಕೋರ್ ಪಂದ್ಯವಾಗಿದ್ದರಿಂದ ಒಂದು ಕಡೆಯಲ್ಲಿ ನೆಲಕಚ್ಚಿ ಆಡಿದ ಶಿಖರ್ ಧವನ್ ವಿಕೆಟ್ ಕಾಯ್ದುಕೊಂಡು ನಿಧಾನದ ಬ್ಯಾಟಿಂಗ್ ಮೊರೆ ಹೋದರು. ಧವನ್ 45 ರನ್ (42 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ 14ನೇ ಓವರಿನ ಕೊನೆಯಲ್ಲಿ ಔಟಾದರು. ತಂಡದ ನಾಯಕ ರಿಷಭ್ ಪಂತ್ 7 ರನ್ (8 ಎಸೆತ, 1 ಬೌಂಡರಿ) ವಿಫಲರಾದರು. ಬಳಿಕ ಬಂದ ಶಿಮ್ರಾನ್ ಹೆಟ್ಮಾಯೆರ್ (14 ರನ್, 9 ಎಸೆತ, 2 ಬೌಂಡರಿ) ಹಾಗೂ ಲಲಿತ್ ಯಾದವ್ (22 ರನ್, 25 ಎಸೆತ, 1 ಬೌಂಡರಿ) ತಾಳ್ಮೆಯ ಅಜೇಯ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮುಂಬೈ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕ್ವಿಂಟನ್ ಡಿ’ಕಾಕ್ (2 ರನ್, 4 ಎಸೆತ) ಹಾಗೂ ತಂಡದ ನಾಯಕ ರೋಹಿತ್ ಶರ್ಮಾ, ವಿಕೆಟ್ ಕಾಯ್ದುಕೊಂಡು ನಿಧಾನವಾಗಿ ಆಡಿ ಔಟಾದರು. ಬಳಿಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 58 ರನ್‍ಗಳ ಜೊತೆಯಾಟ ನಡೆಸಿದರೂ ದೊಡ್ಡ ಮೊತ್ತ ಕೂಡಿ ಹಾಕಲು ವಿಫಲರಾದರು. ಇಶಾನ್ ಕಿಶನ್ 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟಾದರು. ಜಯಂತ್ ಯಾದವ್ 23 ರನ್ (22 ಎಸೆತ, 1 ಬೌಂಡರಿ) ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಶೂನ್ಯ ಸಂಪಾದನೆ ಮಾಡಿದೆ, ಕೃಣಾಲ್ ಪಾಂಡ್ಯ ಕೇವಲ 1 ರನ್ (5 ಎಸೆತ) ಗಳಿಸಿ ನಿರ್ಗಮಿಸಿದರು. ಕೀರನ್ ಪೆÇಲಾರ್ಡ್ 2 ರನ್ (5 ಎಸೆತ) ಗಳಿಸಲು ಮಾತ್ರ ಶಕ್ತರಾದರು. ರಾಹುಲ್ ಚಹರ್ 6 ರನ್ (6 ಎಸೆತ, 1 ಬೌಂಡರಿ) ಬಾರಿಸಿ ನಿರ್ಗಮಿಸಿದರು.
0 comments:
Post a Comment