ಬಂಟ್ವಾಳ, ಎಪ್ರಿಲ್ 29, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಪುತ್ತೂರು ನಿವಾಸಿ ನಿರಂಜನ್ (35) ಎಂಬವರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯ ರಾತ್ರಿ ವೇಳೆಯೇ ಇಲ್ಲಿನ ಹಳೆ ನೇತ್ರಾವತಿ ಸೇತುವೆ ಮೇಲೆ ಬೈಕೊಂದು ನಿಂತಿತ್ತು ಎನ್ನಲಾಗಿದೆ. ಆದರೆ ಜನ ಕಂಡು ಬಾರದ ಹಿನ್ನಲೆಯಲ್ಲಿ ಸ್ಥಳೀಯರು ಗಮನ ಕೊಟ್ಟಿರಲಿಲ್ಲ. ಗುರುವಾರ ಬೆಳಿಗ್ಗೆಯೂ ಬೈಕ್ ಅಲ್ಲೇ ಇದ್ದುದರಿಂದ ಅನುಮಾನಗೊಂಡ ಸ್ಥಳೀಯ ಗೂಡಿನಬಳಿ ಪರಿಸರದ ಈಜುಪಟು ಯುವಕರಾದ ಹಾರಿಸ್, ಮುಹಮ್ಮದ್ ಮಮ್ಮು, ಇಬ್ರಾಯಾಕ, ಅಮ್ಮಿ, ಇಕ್ಬಾಲ್, ಶಮೀರ್ ಮೊದಲಾದವರ ತಂಡ ನೇತ್ರಾವತಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ವಲ್ಪ ಸಮಯ ನೀರಿನಲ್ಲಿ ಕಾರ್ಯಾಚರಣೆ ನಡೆಸುತ್ತಲೇ ಯುವಕನ ಮೃತದೇಹ ಪತ್ತೆಯಾಗಿದೆ.
ಬೈಕಿನಲ್ಲಿ ದೊರೆತ ದಾಖಲೆ ಆಧಾರದಲ್ಲಿ ಸ್ಥಳೀಯರು ಸಂಪರ್ಕಿಸಿದಾಗ ಮೃತ ಯುವಕನ ಹೆಸರು, ವಿಳಾಸ ಪತ್ತೆಯಾಗಿದ್ದು, ಮೃತ ನಿರಂಜನ್ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದು, ಒಂದು ವರ್ಷದ ಹಿಂದೆ ಊರಿಗೆ ಬಂದು ಇಲ್ಲೆ ಇದ್ದರು ಎನ್ನಲಾಗಿದೆ. ವಿವಾಹಿತರಾಗಿರುವ ಇವರಿಗೆ ಒಂದು ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತನ ಕುಟುಂಬಿಕರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಇಲ್ಲೇ ಸಮೀಪದಲ್ಲಿ ಶ್ರವಣಬೆಳಗೊಳ ಮೂಲದ ಯುಕವನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಯತ್ನ ನಡೆಸಿದ್ದು, ಇಫ್ತಾರ್‍ಗಾಗಿ ಮನೆಗೆ ತೆರಳುತ್ತಿದ್ದ ನೇತ್ರಾವತಿ ವೀರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸತ್ತಾರ್ ಗೂಡಿನಬಳಿ ಹಾಗೂ ಸ್ವಾದಿಕ್ ಎಂ ಕೆ ಅವರು ಧಾವಿಸಿ ಆತÀನನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸಿಯಾಗಿದ್ದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು. ಇದೀಗ ವಾರದ ಅಂತರದಲ್ಲಿ ಇಲ್ಲಿನ ನೇತ್ರಾವತಿಯಲ್ಲಿ ಎರಡನೇ ಪ್ರಕರಣ ನಡೆದಿದೆ.
0 comments:
Post a Comment