ಮಡಿಕೇರಿ, ಎಪ್ರಿಲ್ 03, 2021 (ಕರಾವಳಿ ಟೈಮ್ಸ್) : ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರನ್ನು ಮನೆಯೊಳಗೆ ಕೂಡಿ ಹಾಕಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಒಂದೇ ಕುಟುಂಬದ 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಮನೆಯೊಳಗಿನ ಬೆಂಕಿಯ ಕೆನ್ನಾಲಗೆಗೆ ಸೀತಾ (45), ಬೇಬಿ (40) ಹಾಗೂ ಪ್ರಾರ್ಥನಾ(6) ಅವರು ಸ್ಥಳದಲ್ಲೇ ಮೃತಪಟ್ಟರೆ, ಇತರ ಮೂರು ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿ ಹಚ್ಚಿದ ಆರೋಪಿಯನ್ನು ಎರವರ ಭೋಜ ಎಂದು ಹೆಸರಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಕುಟುಂಬ ಸದಸ್ಯರ ಮೇಲೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದಾನೆ.
ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ವಸಂತ (ಚಿಟ್ಟಿಯ್ಯಪ್ಪ) ಎಂಬವರ ಲೈನ್ ಮನೆಯಲ್ಲಿ ಎರವರ ಭೋಜ ವಾಸವಿದ್ದರು. ಇವರ ಮನೆಗೆ ಕುಟುಂಬದ ಐದಾರು ಮಂದಿ ಸದಸ್ಯರು ಬಂದು ತಂಗಿದ್ದರು. ಬೆಳಗ್ಗಿನ ಜಾವ ಸುಮಾರು 2 ಗಂಟೆ ವೇಳೆಯಲ್ಲಿ ಎರವರ ಬೋಜ ಪಾನಮತ್ತನಾಗಿ ಮನೆಯ ಹೊರ ಬಂದು ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾನೆ. ಮನೆಯ ಮೇಲೇರಿ ಹಂಚು ತೆಗೆದು ಕುಟುಂಬದ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಏನೂ ಮಾಡುವುದೆಂದು ತೋಚದ ಮನೆ ಮಂದಿ ಬೆಂಕಿ ಕೆನ್ನಾಲಗೆಗೆ ಸಿಲುಕಿ ಜಿವ ಕಳೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೆÇನ್ನಂಪೇಟೆ ಪೆÇಲೀಸರು ಆರೋಪಿ ಭೋಜನ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ. ಬಲೆ ಬೀಸಿದ್ದಾರೆ.
0 comments:
Post a Comment