ಬೆಂಗಳೂರು, ಎಪ್ರಿಲ್ 19, 2021 (ಕರಾವಳಿ ಟೈಮ್ಸ್) : ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಆಪ್ತ ಸಹಾಯಕ ಎಚ್.ಜೆ. ರಮೇಶ್ ಕೊರೋನಾ ಪಾಸಿಟಿವ್ ಕಾರಣದಿಂದ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಸ್ವತಃ ಸಚಿವ ಸುರೇಶ್ ಕುಮಾರ್ ತನ್ನ ಫೇಸ್ ಬುಕ್ ಮುಖಪುಟದಲ್ಲಿ ಹೇಳಿಕೊಂಡಿದ್ದು, ರಮೇಶ್ ಅವರು ಸುಮಾರು ಎಂಟು ವರ್ಷಗಳಿಂದ ಸಚಿವರ ಬಳಿ ಕೆಲಸ ಮಾಡುತ್ತಿದ್ದರು. ರಮೇಶ್ ಅವರಿಗೆ ಎಪ್ರಿಲ್ 13ರಂದು ಕೊರೋನಾ ಇರುವುದು ದೃಢವಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ಮೃತಪಟ್ಟಿದ್ದಾರೆ.
0 comments:
Post a Comment