ನವದೆಹಲಿ, ಎಪ್ರಿಲ್ 19, 2021 (ಕರಾವಳಿ ಟೈಮ್ಸ್) : ಕೊರೊನಾ ಅಲೆ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಎಪ್ರಿಲ್ 19 ರಿಂದ ಒಂದು ವಾರ ಕಾಲ ದೆಹಲಿಯನ್ನು ಸಂಪೂರ್ಣ ಲಾಕ್ ಮಾಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‍ರೊಂದಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇಂದು ರಾತ್ರಿ 10 ಗಂಟೆಯಿಂದ ಎಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಘೋಷಿಸಿದರು. ಅಗತ್ಯ ಸೇವೆಗಳು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಈ ಅವಧಿಯಲ್ಲಿ ಬಂದ್ ಆಗಿರಲಿದೆ ಎಂದವರು ತಿಳಿಸಿದರು.
ಪ್ರತಿ ದಿನದ ಕೋವಿಡ್ ಪ್ರಕರಣಗಳೊಂದಿಗೆ 25,462 ಹೊಸ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಪಾಸಿಟಿವ್ ಪ್ರಕರಣವು ಶೇಕಡಾ 29.74ಕ್ಕೆ ಏರಿಕೆಯಾಗಿದೆ ಎಂದು ಕಳೆದ ವಾರ ಸಿಎಂ ಕೇಜ್ರಿವಾಲ್ ವರ್ಚುವಲ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ನಿಗ್ರಹಿಸಲು ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸಿದ್ದರು.
0 comments:
Post a Comment