ಮಂಗಳೂರು, ಎಪ್ರಿಲ್ 30 (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕು ತಡೆಗೆ ರಾಜ್ಯಾದ್ಯಂತ ಎಪ್ರಿಲ್ 27 ರಿಂದ ಕೊರೋನಾ ಕರ್ಫ್ಯೂ ಜಾರಿಯಾಗಿರುವ ಹೊರತಾಗಿಯೂ ಮಾರ್ಗಸೂಚಿ ಧಿಕ್ಕರಿಸಿದ ಆರೋಪದಲ್ಲಿ ಮಂಗಳೂರಿನ ಖಾಸಗಿ ಕಾಲೇಜು ವಿರುದ್ಧ ಪ್ರಕರಣ ದಾಖಲಾಗಿದೆ.
ಎಪಿಡಮಿಕ್ ಡಿಸೀಸಸ್ ಕಾಯ್ದೆಯಡಿ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಜ್ಯಾದ್ಯಂತ ಹಲವು ನಿರ್ಬಂಧಗಳು ಜಾರಿಯಲ್ಲಿದೆ. ಆದರೆ ಈ ಕಾಲೇಜು ಮಾತ್ರ ಎಂದಿನಂತೆ ವಿದ್ಯಾರ್ಥಿಗಳನ್ನು ಸೇರಿಸಿ ಕ್ಯಾಂಪಸ್ ಒಳಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಕೊರೋನಾ 2ನೇ ಅಲೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ರೋಗಿಗಳಿಗೆ ಆಸ್ಪತ್ರೆಗಳಲ್ಲೂ ಸೂಕ್ತ ವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಅದ್ಯಾವುದಕ್ಕೂ ಕ್ಯಾರೇ ಅನ್ನದ ಖಾಸಗಿ ಕಾಲೇಜು ವಿರುದ್ದ ಇದೀಗ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.
0 comments:
Post a Comment