ಮಂಗಳೂರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಕೇರಳ ನಿವಾಸಿ ಯುವ ವೈದ್ಯೆ ಕೊರೊನಾಗೆ ಬಲಿ - Karavali Times ಮಂಗಳೂರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಕೇರಳ ನಿವಾಸಿ ಯುವ ವೈದ್ಯೆ ಕೊರೊನಾಗೆ ಬಲಿ - Karavali Times

728x90

28 April 2021

ಮಂಗಳೂರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಕೇರಳ ನಿವಾಸಿ ಯುವ ವೈದ್ಯೆ ಕೊರೊನಾಗೆ ಬಲಿ


ಮಂಗಳೂರು, ಎಪ್ರಿಲ್ 28, 2021 (ಕರಾವಳಿ ಟೈಮ್ಸ್) : ನಗರದ ಹೊರ ವಲಯದ ದೆರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದ ಕೇರಳ ಮೂಲದ ಮಹಿಳಾ ವೈದ್ಯೆಯೋರ್ವರು ಕೊರೊನಾ ಸೋಂಕಿಗೆ ಬಲಿಯಾದ ಘಟನೆ ನಡೆದಿದೆ. 

ಕೇರಳ ರಾಜ್ಯದ ತಲಶೇರಿ ಮೂಲದ ಡಾ. ಬಷೀರಾ ಕೊರೊನಾಗೆ ಬಲಿಯಾದ ವೈದ್ಯೆ. ಕಳೆದ 8 ತಿಂಗಳ ಹಿಂದೆ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯ ವೈದ್ಯರನ್ನು ವಿವಾಹವಾಗಿದ್ದ ಬಶೀರಾ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ದಂಪತಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬಷೀರಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲಾಗಿದೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಕೇರಳ ನಿವಾಸಿ ಯುವ ವೈದ್ಯೆ ಕೊರೊನಾಗೆ ಬಲಿ Rating: 5 Reviewed By: karavali Times
Scroll to Top