ಮುಂಬೈ, ಎಪ್ರಿಲ್ 13, 2021 (ಕರಾವಳಿ ಟೈಮ್ಸ್) : ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‍ಮೆನ್ ಕ್ರಿಸ್ ಗೇಲ್ ಇದೀಗ ಮತ್ತೊಂದು ಮೈಲುಗಲ್ಲು ದಾಟಿದ್ದು, ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ ಇದೀಗ ಐಪಿಎಲ್ ಟೂರ್ನಿಯಲ್ಲಿ 350 ಸಿಕ್ಸರ್ ಸಿಡಿಸಿದ್ದು, ಈ ದಾಖಲೆ ಬರೆದ ಮೊದಲ ಆಟಗಾರನಾಗಿದ್ದಾರೆ.
ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡದ ಬೌಲರ್ ಬೇನ್ ಸ್ಟೋಕ್ಸ್ ಎಸೆದ 7ನೇ ಓವರಿನ 3ನೇ ಎಸೆತವನ್ನು ಮಿಡ್‍ವಿಕೆಟ್ ಬೌಂಡರಿ ಮೇಲ್ಭಾಗದಲ್ಲಿ ಸಿಕ್ಸರ್ ಎತ್ತಿದ ಗೇಲ್ ಐಪಿಎಲ್‍ನಲ್ಲಿ 350ನೇ ಸಿಕ್ಸರ್ ಸಿಡಿಸಿದ ಅಪರೂಪದ Cದಾಖಲೆ ಬರೆದರು.
2008ನೇ ಆವೃತ್ತಿ ಐಪಿಎಲ್‍ನಿಂದ ಇದುವರೆಗೆ ಒಟ್ಟು 133 ಪಂದ್ಯಗಳಿಂದ ಗೇಲ್ 388 ಬೌಂಡರಿ ಮತ್ತು 351 ಸಿಕ್ಸ್ ಸಿಡಿಸಿದ್ದಾರೆ. ಗೇಲ್ ಬಳಿಕದÀ ಸ್ಥಾನದಲ್ಲಿ 170 ಪಂದ್ಯಗಳಿಮಧ 237 ಸಿಕ್ಸರ್ ಸಿಡಿಸಿದ ಆರ್‍ಸಿಬಿ ತಂಡದ ಆಟಗಾರ ಎಬಿಡಿ ವಿಲಿಯರ್ಸ್ ಇದ್ದಾರೆ. 3ನೇ ಸ್ಥಾನದಲ್ಲಿ 205 ಪಂದ್ಯಗಳಿಂದ 216 ಸಿಕ್ಸರ್ ಸಿಡಿಸಿರುವ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಇದ್ದರೆ, ನಾಲ್ಕನೇ ಸ್ಥಾನದಲ್ಲಿ 214 ಸಿಕ್ಸರ್‍ಗಳೊಂದಿಗೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ. 201 ಸಿಕ್ಸರ್‍ಗಳೊಂದಿಗೆ ಆರ್.ಸಿ.ಬಿ. ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ.
0 comments:
Post a Comment