ಬಂಟ್ವಾಳ, ಎಪ್ರಿಲ್ 09, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಅಂತರ್ ವಲಯ ಮಟ್ಟದ 11 ಜನರ ಫುಲ್ ಗ್ರೌಂಡ್ ಮಾದರಿಯ “ರಾಜೀವ ಗಾಂಧಿ ಟ್ರೋಫಿ-2021” ಕ್ರಿಕೆಟ್ ಪಂದ್ಯಾಟ ಎಪ್ರಿಲ್ 11 ರಂದು ಭಾನುವಾರ ಬೆಳಿಗ್ಗೆ 9 ಕ್ಕೆ ಬಂಟ್ವಾಳ ಬಸ್ತಿಪಡ್ಪು ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಕೂಟದಲ್ಲಿ ಅಮ್ಟಾಡಿ, ಅರಳ, ಸಂಗಬೆಟ್ಟು, ರಾಯಿ, ಪಂಜಿಕಲ್ಲು, ಕುಕ್ಕಿಪಾಡಿ, ಚೆನ್ನೈತ್ತೋಡಿ, ಇರ್ವತ್ತೂರು, ಪಿಲಾತಬೆಟ್ಟು, ಬಡಗಕಜೆಕಾರು, ಉಳಿ, ಸರಪಾಡಿ, ಮಣಿನಾಲ್ಕೂರು, ನಾವೂರು, ಕಾವಳಪಡೂರು, ಕಾವಳಮೂಡೂರು, ಬಂಟ್ವಾಳ ಕಸಬಾ ವಲಯ ಕಾಂಗ್ರೆಸ್ ಸಮಿತಿ ತಂಡಗಳು ಭಾಗವಹಿಸಲಿವೆ.
ವಿಜೇತ ತಂಡಗಳಿಗೆ ಪ್ರಥಮ 7500/- ರೂಪಾಯಿ, ದ್ವಿತೀಯ 5000/-, ತೃತೀಯ 2500/- ರೂಪಾಯಿ ನಗದು ಹಾಗೂ ರಾಜೀವ್ ಗಾಂಧಿ ಟ್ರೋಫಿ ನೀಡಿ ಪುರಸ್ಕರಿಸಲಾಗುವುದು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment