ಬಂಟ್ವಾಳ, ಎಪ್ರಿಲ್ 12, 2021 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಭಾನುವಾರ ಇಲ್ಲಿನ ಆಲಡ್ಕ ಮೈದಾನದಲ್ಲಿ ನಡೆದ ಸಿಸಿಎಲ್ (ಚಿಲ್ಡ್ರನ್ಸ್ ಚಾಂಪಿಯನ್ಸ್ ಲೀಗ್) ಕ್ರಿಕೆಟ್ ಪಂದ್ಯಾಟದಲ್ಲೂ ಹಕೀಂ ಉಲ್ಲಾಸ್ ಮಾಲಕತ್ವದ ಟೀಂ ಬೀಯಿಂಗ್ ಭೂಯಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಖಲೀಲುರ್ರಹ್ಮಾನ್ ಮಾಲಕತ್ವದ ಹಯಾಮಾ ವಾರಿಯರ್ಸ್ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಬೀಯಿಂಗ್ ಭೂಯಾ ತಂಡದ ಅನ್ಸೀಪ್ ಅಕ್ಕರಂಗಡಿ ಸರಣಿ ಶ್ರೇಷ್ಠ, ತ್ವಾಹಿರ್ ಬಂಗ್ಲೆಗುಡ್ಡೆ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರೆ, ಹಯಾಮಾ ವಾರಿಯರ್ಸ್ ತಂಡದ ಫಾಝಿಲ್ ಆಲಡ್ಕ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಶಫೀಕ್ ಮಾಲಕತ್ವದ ಎ ಟು ಝಡ್ ಹಾಗೂ ರಶೀದ್ ಮಾಲಕತ್ವದ ಕತಾರ್ ವಾರಿಯರ್ಸ್ ತಂಡಗಳು ಕೂಟದಲ್ಲಿ ಭಾಗವಹಿಸಿತ್ತು.
ಉದ್ಯಮಿಗಳಾದ ಹಕೀಂ ಉಲ್ಲಾಸ್, ಇಸ್ಮಾಯಿಲ್ ಬಾವಾಜಿ, ಸಿದ್ದೀಕ್ ಬಂಗ್ಲೆಗುಡ್ಡೆ, ಶರೀಫ್ ಭೂಯಾ ಬೋಗೋಡಿ, ರಶೀದ್ ಕತಾರ್, ಸಿದ್ದೀಕ್ ಪಿ.ಜೆ., ತೌಸೀಫ್ ಬೋಗೋಡಿ, ಹನೀಫ್ ಮೊದಲಾದವರು ವಿಜೇತರಿಗೆ ಬಹುಮಾನ ವಿತರಿಸಿದರು.
ಇತ್ತೀಚೆಗೆ ನಡೆದ ಸನ್ ಪ್ಯೂರ್ ಎಪಿಎಲ್ (ಆಲಡ್ಕ ಪ್ರೀಮಿಯರ್ ಲೀಗ್) ಸೀಸನ್-5 ಹಾಗೂ ಎಸಿಎಲ್ (ಆಲಡ್ಕ ಚಾಂಪಿಯನ್ಸ್ ಲೀಗ್) ಟ್ರೋಫಿಯನ್ನು ಕೂಡಾ ಹಕೀಂ ಉಲ್ಲಾಸ್ ಮಾಲಕತ್ವದ ಬೀಯಿಂಗ್ ಭೂಯಾ ತಂಡ ಗೆದ್ದುಕೊಂಡಿತ್ತು.
0 comments:
Post a Comment