ಕೊಚ್ಚಿ, ಎಪ್ರಿಲ್ 11, 2021 (ಕರಾವಳಿ ಟೈಮ್ಸ್) : ಕೇರಳ ಮೂಲಕ ಬಹುರಾಷ್ಟ್ರೀಯ ಸಂಸ್ಥೆ ಲುಲು ಗ್ರೂಪ್ ಆಫ್ ಕಂಪೆನಿಯ ಮಾಲಕ ಯೂಸುಫ್ ಅಲಿ, ಅವರ ಪತ್ನಿ, ಮೂವರು ಸಿಬ್ಬಂದಿ ಸಹಿತ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಭಾನುವಾರ ಬೆಳಿಗ್ಗೆ ಕೊಚ್ಚಿಯಲ್ಲಿ ಪತಗೊಂಡಿದ್ದು, ಎಲ್ಲ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಡಾ ಯೂಸುಫ್ ಅಲಿ ಸಹಿತ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪನಂಗಾಡ್ ಎಂಬಲ್ಲಿನ ಕೇರಳ ಮೀನುಗಾರಿಕೆ ಹಾಗೂ ಸಮುದ್ರ ಅಧ್ಯಯನ ವಿಶ್ವವಿದ್ಯಾಲಯದ ಆವರಣದ ಔಗು ಪ್ರದೇಶದಲ್ಲಿ ಏಕಾಏಕಿ ಭೂಸ್ಪರ್ಶ ಪಡೆದುಕೊಂಡಿದೆ. ತಾಂತ್ರಿಕ ಕಾರಣದಿಂದ ಈ ಅವಗಡ ಸಂಭವಿಸಿದೆ ಎನ್ನಲಾಗಿದೆ. ಲೇಕ್ ಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಲು ಅಲಿ ದಂಪತಿ ಈ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಪ್ರಯಾಣಿಕರು ಹಾಗೂ ಪೈಲಟ್‍ಗಳು ಸದ್ಯ ಅಪಾಯವಿಲ್ಲದೆ ಸುರಕ್ಷಿತರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment