ವಿಧಾನಸಭೆ ಉಪ ಚುನಾವಣೆಗೆ ಉಮೇದುವಾರರ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್ - Karavali Times ವಿಧಾನಸಭೆ ಉಪ ಚುನಾವಣೆಗೆ ಉಮೇದುವಾರರ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್ - Karavali Times

728x90

18 March 2021

ವಿಧಾನಸಭೆ ಉಪ ಚುನಾವಣೆಗೆ ಉಮೇದುವಾರರ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್

 
ನವದೆಹಲಿ, ಮಾ. 19, 2021 (ಕರಾವಳಿ ಟೈಮ್ಸ್) :
ರಾಜ್ಯದಲ್ಲಿ ಎಪ್ರಿಲ್ 17 ರಂದು ಉಪಚುನಾವಣೆ ಘೋಷಣೆಯಾಗಿರುವ 2 ಸಹಿತ 3 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಉಮೇದರುವಾರರನ್ನು ಗುರುವಾರ ಘೋಷಿಸಿಕೊಂಡಿದೆ. 


    ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಲಾಗಿದ್ದು, ಮಸ್ಕಿ ಕ್ಷೇತ್ರದ ಅಭ್ಯರ್ಥಿಯಾಗಿ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಪಕ್ಷ ಸೇರಿದ್ದ ಬಸವನಗೌಡ ತುರವಿಹಾಳ ಅವರನ್ನು ಘೋಷಿಸಲಾಗಿದೆ. ಇನ್ನೂ ಉಪ ಚುನಾವಣೆ ಘೋಷಣೆಯಾಗದ ಸಿಂದಗಿ ಕ್ಷೇತ್ರಕ್ಕೂ ಕಾಂಗ್ರೆಸ್ ಉಮೇದುವಾರರನ್ನು ಘೋಷಿಸಿದ್ದು, ದಿವಂಗತ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಮೂರು ಕ್ಷೇತ್ರಗಳಿಗೆ ಮುಂಚಿತವಾಗಿಯೇ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಆದೇಶ ಹೊರಡಿಸಿದ್ದಾರೆ.
    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಇನ್ನಷ್ಟೆ ಮಾಡಬೇಕಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಿಧಾನಸಭೆ ಉಪ ಚುನಾವಣೆಗೆ ಉಮೇದುವಾರರ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್ Rating: 5 Reviewed By: karavali Times
Scroll to Top