ಬಂಟ್ವಾಳ, ಮಾ. 16, 2021 (ಕರಾವಳಿ ಟೈಮ್ಸ್) : ಜಮಾಅತ್ ರಿಸರ್ಚ್ ಸೆಂಟರ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಇತ್ತೀಚೆಗೆ ಬಡಕಬೈಲು ಪಬ್ಲಿಕ್ ಶಾಲೆಯ ಇಮಾದ್ ಎಕಾಡೆಮಿ ಮಜ್ಲಿಸ್ ಸಭಾಂಗಣದಲ್ಲಿ ನಡೆಯಿತು.
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಜಮಾತ್ ರಿಸರ್ಚ್ ಸೆಂಟರ್ ಅಧ್ಯಕ್ಷ ಅಬೂಬಕ್ಕರ್ ಪಿಡಬ್ಲ್ಯುಡಿ ಅಮ್ಮುಂಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಗಾಣೆಮಾರ್, ಉಸ್ಮಾನ್ ಗರ್ಗಲ್, ಮುಸ್ತಫಾ ರಾಂಟೆ, ಹಂಝ ಟಿ.ಎಚ್. ಕಲಾಯಿ. ಕೆಎಂಎಫ್ ಖಲೀಲ್ ಅಬ್ಬೆಟ್ಟು, ಉಸ್ಮಾನ್ ಕಲಾಯಿ, ಅಶ್ರಫ್ ಕೆ.ಎಸ್. ಪೆÇಳಲಿ ಮೊದಲಾದವರು ಭಾಗವಹಿಸಿದ್ದರು.
ಬಾಬಾ ಫಾಕ್ರುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಅನೀಸ್ ಕೆ. ಸ್ವಾಗತಿಸಿ, ಅಬ್ದುಲ್ ಹಕೀಂ ಎಂ.ಟಿ. ವಂದಿಸಿದರು.
ತಾಲೂಕಿನ ಅಮ್ಮುಂಜೆ, ಕರಿಯಂಗಳ ಹಾಗೂ ಬಡಗಬೆಳ್ಳೂರು ಈ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 8 ಜಮಾಅತ್‍ಗಳ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಿಂದ ಜಮಾತ್ ರಿಸರ್ಚ್ ಸೆಂಟರ್ ಕಾರ್ಯಾಚರಿಸುತ್ತಿದೆ.
0 comments:
Post a Comment