ಚಿಕ್ಕಮಗಳೂರು, ಮಾ. 11, 2021 (ಕರಾವಳಿ ಟೈಮ್ಸ್) : ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುರುರವಾರ ಭಾರೀ ಮಳೆ ಸುರಿದಿದ್ದು, ಜನ ಆತಂಕಗೊಳ್ಳುವಂತೆ ಮಾಡಿದೆ. ಸತತ ಒಂದು ತಾಸು ಕಾಲ ಸುರಿದ ಭಾರೀ ಮಳೆ ಸುಮಾರು 20 ಮಿ.ಮೀ. ದಾಖಲಾಗಿದೆ.
ಜಿಲ್ಲೆಯ ಕಳಸ ತಾಲೂಕಿನ ಇಡಕಣಿ, ಹೆಮ್ಮನೆ, ಬಾಳೆಹೊಳೆ, ಹಿರೇಬೈಲು, ಕೆಳಭಾಗ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಕಾಫಿ, ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ತೋಟದ ಮಾಲೀಕರು ಮಳೆಯಿಂದಾಗಿ ತೀವ್ರ ಕಂಗಾಲಾಗಿದ್ದಾರೆ.
ದಿಢೀರ್ ಆಗಿ ಸುರಿದ ಭಾರೀ ಮಳೆಗೆ ಜಜ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ವರ್ಷಗಳಿಂದ ಮಲೆನಾಡಿನಲ್ಲಿ ತೀವ್ರ ಹಾನಿ ಉಂಟು ಮಾಡಿದ್ದ ಮಳೆರಾಯ ಈ ಬಾರಿಯೂ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಆರಂಭಗೊಂಡಿದ್ದು, ಈ ಬಾರಿ ಮಳೆ ವ್ಯಾಪಕವಾಗಿ ಸುರಿಯುವ ಲಕ್ಷಣ ಕಂಡು ಬಂದಿದೆ. ಇದರಿಂದ ಸಹಜವಾಗಿಯೇ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.
0 comments:
Post a Comment