ಬೆಂಗಳೂರು, ಮಾ. 11, 2021 (ಕರಾವಳಿ ಟೈಮ್ಸ್) : ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ್ದ ಮಹಿಳೆಯ ಮೂಗಿಗೆ ಪಂಚ್ ಮಾಡಿದ್ದ ಝೊಮ್ಯಾಟೋ ಬಾಯ್ ಕಾಮರಾಜ್ ನನ್ನು ಬೆಂಗಳೂರು ಪೆÇಲೀಸರು ಬಂಧಿಸಿದ್ದಾರೆ.
ಡೆಲಿವರಿ ತಡವಾಗಿದ್ದಕ್ಕೆ ಮಹಿಳೆ ಮತ್ತು ಝೊಮ್ಯಾಟೋ ಬಾಯ್ ನಡುವೆ ವಾಗ್ವಾದ ನಡೆದು ಆತ ಮಹಿಳೆಯ ಮೂಗಿಗೆ ಪಂಚ್ ಮಾಡಿದ್ದ. ಈ ಬಗ್ಗೆ ಇನ್ಸ್ಟಾಗ್ರಾಮ್ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಮಹಿಳೆ ಹಿತೇಶಾ ಚಂದ್ರಾಣಿ ರಕ್ತಸಿಕ್ತ ಮೂಗಿನೊಂದಿಗೆ ವಿಡಿಯೋ ಮಾಡಿ ಘಟನೆಯನ್ನು ವಿವರಿಸಿದ್ದರು. ಮಹಿಳೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಮಹಿಳೆ ಝೊಮ್ಯಾಟೋದಲ್ಲಿ ಆಹಾರ ಆರ್ಡರ್ ಮಾಡಿದ್ದು, ಡೆಲಿವರಿ ತಡವಾಗಿದ್ದಕ್ಕೆ ಝೊಮ್ಯಾಟೋ ಡೆಲಿವರಿ ಹುಡುಗನನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ತಡವಾಗಿದ್ದಕ್ಕಾಗಿ ಕಾರಣ ಅರಿಯುವುದಕ್ಕಾಗಿ ಝೊಮ್ಯಾಟೋ ಕಾರ್ಯನಿರ್ವಾಹಕರೊಂದಿಗೆ ಮಾತನಾಡುತ್ತಿದ್ದಾಗ ಡೆಲಿವರಿ ಬಾಯ್ ಬಂದಿದ್ದ. ಆತನಿಗೆ ಕಾಯುವುದಕ್ಕೆ ಅಥವಾ ಆರ್ಡರ್ ವಾಪಸ್ ತೆಗೆದುಕೊಂಡು ಹೋಗುವುದಕ್ಕೆ ಸೂಚಿಸಿದ್ದಾರೆ. ಆದರೆ ಆರ್ಡರ್ ವಾಪಸ್ ತೆಗೆದುಕೊಂಡು ಹೋಗಲು ಡೆಲಿವರಿ ಬಾಯ್ ನಿರಾಕರಿಸಿ, ನಾನೇನು ನಿಮ್ಮ ಗುಲಾಮನೇ ಎಂದು ಪ್ರಶ್ನಿಸಿದ್ದಾನೆ. ಏರು ಧ್ವನಿಯಲ್ಲಿ ಆತ ಮಾತನಾಡಿದ್ದರಿಂದ ಬಾಗಿಲು ಹಾಕಲು ಯತ್ನಿಸಿದಾಗ ಒಳ ನುಗ್ಗಿ ಟೇಬಲ್ ಮೇಲಿದ್ದ ಆರ್ಡರ್ ಕಸಿದುಕೊಂಡು ಮಹಿಳೆಯ ಮೂಗಿಗೆ ಪಂಚ್ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ತನ್ನ ಮೂಗು ಮುರಿದಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೊಳಪಡಬೇಕೆಂದು ಹೇಳುತ್ತಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ಝೊಮ್ಯಾಟೋ ಈ ಮಹಿಳೆಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು ಪೆÇಲೀಸ್ ತನಿಖೆ ಹಾಗೂ ವೈದ್ಯಕೀಯ ನೆರವಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ ಎನ್ನಲಾಗಿದೆ.
0 comments:
Post a Comment