ಬಂಟ್ವಾಳ, ಮಾ. 25, 2021 (ಕರಾವಳಿ ಟೈಮ್ಸ್) : ಮಾಣಿ ವಲಯ ವಾಲಿಬಾಲ್ ಎಸೋಸಿಯೇಶನ್ ನೂತನ ಅದ್ಯಕ್ಷರಾಗಿ ಸಂಪತ್ ಕೋಟ್ಯಾನ್ ಕಡೇಶಿವಾಲಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಪೇಂದ್ರ ಆಚಾರ್ಯ ಗಣೇಶನಗರ ಆಯ್ಕೆಯಾಗಿದ್ದಾರೆ.
ಮಾಣಿ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಿನಕರ ಪೂಜಾರಿ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಎಸೋಸಿಯೇಶನ್ ಉಪಾದ್ಯಕ್ಷರಾಗಿ ಚಂದ್ರಶೇಖರ ಪೆರಾಜೆ ಹಾಗೂ ರವಿ ಸೇರ, ಜೊತೆ ಕಾರ್ಯದರ್ಶಿಯಾಗಿ ಮಿಥುನ್ ಕೇವ, ನರಸಿಂಹ ಭಟ್ ಬೊಳ್ಳಾರ್, ಕೋಶಾಧಿಕಾರಿಯಾಗಿ ಸುಮಂತ್ ಅಡ್ಲಬೆಟ್ಟು, ಕ್ರೀಡಾ ಕಾರ್ಯದರ್ಶಿಗಳಾಗಿ ತಿಲಕ್ ಮಾಣಿ, ರಾಧಾಕೃಷ್ಣ ಪೆರ್ನೆ, ಕುಸುಮಾಕರ ಎಲ್ಕಾಜೆ, ಸುಜಿತ್ ಉರ್ದಿಲ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದಿನಕರ ಪೂಜಾರಿ ಅಡ್ಲಬೆಟ್ಟು, ಪ್ರವೀಣ್ ಮಠ, ನಿತೀಶ್ ಗಡಿಯಾರ ಆಯ್ಕೆಯಾದರು.
ಗೌರವ ಸಲಹೆಗಾರಾಗಿ ಬೇಬಿ ನಾಯ್ಕ್ ನೇರಳಕಟ್ಟೆ, ಅಣ್ಣಿ ಪೂಜಾರಿ ಅಡ್ಲಬೆಟ್ಟು, ಮಹಮ್ಮದ್ ಹನೀಫ್ ಕಡೇಶ್ವಾಲ್ಯ, ರವಿ ಪೆರ್ನೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜಗದೀಶ ಅಡ್ಲಬೆಟ್ಟು, ಲೋಕೇಶ್ ಬೊಳ್ಳಾರ್, ಲೋಹಿತ್ ನೇರಳಕಟ್ಟೆ, ಶ್ರೀನಾಥ್ ಮಾಣಿ, ಪ್ರದೀಪ್ ಕೇವ ಹಾಗೂ ಗಿರೀಶ್ ಕೊರತಗುರಿ ಅವರನ್ನು ಆರಿಸಲಾಯಿತು.
0 comments:
Post a Comment