ಬಂಟ್ವಾಳ, ಮಾ. 06, 2021 (ಕರಾವಳಿ ಟೈಮ್ಸ್) : ವೀರಕಂಭ ಗ್ರಾಮದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಕಸಗಳು ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಬಿದ್ದುಕೊಂಡಿದ್ದು, ರೋಗ ಭೀತಿ ಆತಂಕ ಎದುರಾಗಿದೆ. ಹೆಚ್ಚಿನ ಜನವಸತಿ ಇರುವ ಪ್ರದೇಶಗಳಲ್ಲಿ ಕಸಗಳನ್ನು, ತ್ಯಾಜ್ಯಗಳನ್ನು ಹಾಕಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆ ಬದಿಗಳಲ್ಲಿ ಕಸ ತ್ಯಾಜ್ಯಗಳನ್ನು ಎಸೆಯುವುದರಿಂದ ಸಮಸ್ಯೆ ಉಂಟಾಗುತ್ತಿದೆ.
ಈ ಕಾರಣದಿಂದ ಗ್ರಾಮದ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೂ ಬೀದಿ ದೀಪಗಳು ಕೂಡಾ ಸರಿಯಾಗಿ ಇರುವುದಿಲ್ಲ ಹೆಚ್ಚಿನ ಕಡೆಗಳಲ್ಲಿ ಇರುವ ಬೀದಿ ದೀಪಗಳು ಕೆಟ್ಟು ಹೋಗಿರುತ್ತದೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲೂ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಬೇಕಾಗಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಡಿ.ವೈ.ಎಫ್.ಐ ಕೆಲಿಂಜ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಘಟಕದ ಗೌರವಾಧ್ಯಕ್ಷ ಸುಲೈಮಾನ್, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಘಟಕಾಧ್ಯಕ್ಷ ಅನ್ಸಾರ್, ಕಾರ್ಯದರ್ಶಿ ತೌಸೀಫ್, ಪ್ರಮುಖರಾದ ಶಮೀರ್, ಶೆರೀಫ್, ರೋಶನ್, ಸರಪುದ್ದೀನ್ ಮೊದಲಾದವರಿದ್ದರು.
0 comments:
Post a Comment