ನವದೆಹಲಿ, ಮಾ. 18, 2021 (ಕರಾವಳಿ ಟೈಮ್ಸ್) : ಮುಂದಿನ ಒಂದು ವರ್ಷದೊಳಗೆ ದೇಶದ ಎಲ್ಲ ಟೋಲ್ ಬೂತ್ ಗಳನ್ನು ತೆರವುಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಅನುಷ್ಠಾನಗೊಳಿಸಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖಾ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಶೇ. 93 ರಷ್ಟು ವಾಹನಗಳು ಈಗಾಗಲೇ ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಬಳಕೆ ಮಾಡುತ್ತಿದೆ. ಉಳಿದ ಶೇ. 7 ರಷ್ಟು ವಾಹನಗಳು ಈಗಲೂ ಕೂಡಾ ಫಾಸ್ಟ್ ಟ್ಯಾಗ್ ಬಳಸದೆ ದುಪ್ಪಟ್ಟು ಟೋಲ್ ಪಾವತಿಸುತ್ತಿವೆ ಎಂದು ಸಚಿವರು ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ತಿಳಿಸಿದರು.
ಮುಂದಿನ ಒಂದು ವರ್ಷದೊಳಗೆ ದೇಶದಲ್ಲಿನ ಎಲ್ಲ ಟೋಲ್ ಫ್ಲಾಝಾಗಳನ್ನು ತೆರವುಗೊಳಿಸುವುದಾಗಿ ಇದೇ ವೇಳೆ ಸಚಿವರು ಸದನಕ್ಕೆ ಭರವಸೆ ನೀಡಿದರು. ಸಂಪೂರ್ಣವಾಗಿ ಜಿಪಿಎಸ್ ಮೂಲಕವೇ ಟೋಲ್ ಸಂಗ್ರಹ ಆಗಲಿದ್ದು, ಜಿಪಿಎಸ್ ಆಧರಿತವಾಗಿ ಹಣ ಸಂಗ್ರಹಿಸಲಾಗುವುದು ಎಂದರು.
ಫಾಸ್ಟ್ ಟ್ಯಾಗ್ ಬಳಸದ ವಾಹನಗಳ ತನಿಖೆ ನಡೆಸುವಂತೆ ಪೆÇಲೀಸರಿಗೆ ಸೂಚಿಸಲಾಗಿದೆ. ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡರೆ, ಟೋಲ್ ಕಳ್ಳತನ, ಜಿಎಸ್‍ಟಿಯಿಂದ ತಪ್ಪಿಸಿಕೊಳ್ಳುವಂತಹ ಪ್ರಕರಣಗಳು ಕಂಡುಬರುವುದಿಲ್ಲ. ಟೋಲ್ ಪ್ಲಾಝಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುವ ಫಾಸ್ಟ್ ಟ್ಯಾಗ್‍ಗಳನ್ನು 2016 ರಲ್ಲಿ ಪರಿಚಯಿಸಲಾಗಿದೆ.
ಟ್ಯಾಗ್‍ಗಳನ್ನು ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಝಾಗಳ ಮೂಲಕ ವಾಹನಗಳು ಮನಬಂದಂತೆ ಹಾದು ಹೋಗುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗುತ್ತದೆ. ಹೊಸ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿದರೆ, ಹಳೆಯ ವಾಹನಗಳಿಗೆ ಉಚಿತ ಫಾಸ್ಟ್‍ಟ್ಯಾಗ್ ನೀಡುವುದಾಗಿ ಸರಕಾರ ಹೇಳಿಕೊಂಡಿದೆ.
0 comments:
Post a Comment