ಅಚ್ಚರಿ, ಅನಿರೀಕ್ಷಿತ ಹಾಗೂ ಅದ್ಭುತ ಫಲಿತಾಂಶಕ್ಕೆ ಸಾಕ್ಷಿಯಾದ ಸನ್ ಪ್ಯೂರ್ ಎಪಿಎಲ್ ಸೀಸನ್-5
ಬಂಟ್ವಾಳ, ಫೆ. 14, 2021 (ಕರಾವಳಿ ಟೈಮ್ಸ್) : ಅಚ್ಚರಿ, ಅನಿರೀಕ್ಷಿತ ಹಾಗೂ ಅದ್ಭುತ ಫಲಿತಾಂಶಕ್ಕೆ ಸಾಕ್ಷಿಯಾದ ಈ ಬಾರಿಯ ಸನ್ ಪ್ಯೂರ್ ಆಲಡ್ಕ ಪ್ರೀಮಿಯರ್ ಲೀಗ್ 5ನೇ ಆವೃತ್ತಿಯ ಕ್ರಿಕೆಟ್ ಕೂಟದಲ್ಲಿ ಹಕೀಂ ಉಲ್ಲಾಸ್ ಹಾಗೂ ಅಶ್ರಫ್ ಎನ್.ಬಿ. ಮಾಲಕತ್ವದ, ಸಿದ್ದೀಕ್ ಪಿ.ಜೆ. ನಾಯಕತ್ವದ ಬೀಯಿಂಗ್ ಭೂಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಳೆದ ವರ್ಷ 2020ರ ಫೆಬ್ರವರಿಯಲ್ಲಿ ನಡೆದ ಎಪಿಎಲ್ 4ನೇ ಆವೃತ್ತಿಯ ಕೂಟದಲ್ಲೂ ಇದೇ 2 ತಂಡಗಳು ಪ್ರಶಸ್ತಿ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಕಳೆದ ಬಾರಿ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಚ್ಚರಿಯ ಸಂಗತಿ ಎಂದರೆ ಕಳೆದ ಬಾರಿಯ ಚಾಂಪಿಯನ್ ತಂಡವನ್ನು ಕೂಡಾ ಸಿದ್ದೀಕ್ ಪಿ.ಜೆ. ಅವರು ವಹಿಸಿಕೊಂಡಿದ್ದರು. ಮಾತ್ರವಲ್ಲ 2019ರಲ್ಲಿ ನಡೆದ 3ನೇ ಆವೃತ್ತಿಯ ಎಪಿಎಲ್ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದ ಫಯಾಝ್ ಮಾಲಕತ್ವದ ಪ್ಲೇಬಾಯ್ಸ್ ತಂಡದ ನಾಯಕತ್ವನ್ನೂ ಕೂಡಾ ಸಿದ್ದೀಕ್ ಅವರೇ ವಹಿಸಿಕೊಂಡಿದ್ದರು. ಈ ಮೂಲಕ ಸತತ ಮೂರು ಆವೃತ್ತಿಯ ಎಪಿಎಲ್ ಕೂಟದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ವಿವಿಧ ತಂಡಗಳ ನೇತೃತ್ವವನ್ನು ಏಕವ್ಯಕ್ತಿ ಸಿದ್ದೀಕ್ ಪಿ.ಜೆ. ಅವರೇ ವಹಿಸಿಕೊಂಡಿದ್ದರು ಎಂಬುದು ಎಪಿಎಲ್ ವಿಶೇಷತೆ.
ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ಫೆ. 27,28 ರಂದು ಹೊನಲು ಬೆಳಕಿನಲ್ಲಿ ಪ್ರಾರಂಭಗೊಂಡ 5ನೇ ಆವೃತ್ತಿಯ ಲೋಕಲ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮಾ 13 ರಂದು ಮುಂದುವರಿದು, ಮಾ 14 ರಂದು ಭಾನುವಾರ ಫೈನಲ್ ಪಂದ್ಯಾಟ ನಡೆಯಿತು.
ಭಾನುವಾರ ಸಂಜೆ ನಡೆದ ಸಮಾರೋಪದ ಸಮಾರಂಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಅಹ್ಮದ್ ಬಾವಾ ಯಾಸೀನ್, ಮುಹಮ್ಮದ್ ಹನೀಫ್ ಹಾಸ್ಕೋ, ಮುಹಮ್ಮದ್ ಹನೀಫ್ ಸಫಾ ಗೋಲ್ಡ್, ರಫೀಕ್ ಎಂ.ಆರ್., ರಿಯಾಝ್ ಆಲಡ್ಕ, ಇಸ್ಮಾಯಿಲ್ ಬಾವಾಜಿ, ಅಬ್ದುಲ್ ಹಕೀಂ ಉಲ್ಲಾಸ್, ಶಮೀರ್ ನಂದಾವರ, ಝಕರಿಯಾ ಕತಾರ್, ಆಸಿಫ್ ಕತಾರ್, ಫಾರೂಕ್ ಎಫ್.ಆರ್.ಕೆ., ಅಶ್ರಫ್ ಎನ್.ಬಿ., ಅಝರ್ ಭೂಯಾ, ಖಲಂದರ್ ಎ ಟು ಝಡ್, ರಿಯಾಝ್ ಅಬ್ದುಲ್ ಖಾದರ್ ಆಲಡ್ಕ, ಶರೀಕ್ ಆಲಡ್ಕ ಮೊದಲಾದವರು ವಿಜೇತರಿಗೆ ಹಾಗೂ ವೈಯುಕ್ತಿಕ ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಿಸಿದರು.
ಭೂಯಾ ಗೈಸ್ ಪದಾಧಿಕಾರಿಗಳಾದ ಹನೀಫ್, ನೌಫಲ್ ಉಪ್ಪುಗುಡ್ಡೆ, ನೌಫಲ್ ಬಂಗ್ಲೆಗುಡ್ಡೆ, ರಶೀದ್ ಕತಾರ್, ರಿಝ್ವಾನ್ ಪಿ.ಜೆ., ಸವಾದ್ ಬಂಗ್ಲೆಗುಡ್ಡೆ, ಇರ್ಶಾದ್ ಇಚ್ಚ, ಕೈಫ್ ಬೋಗೋಡಿ, ದಾವೂದ್ ಬೋಗೋಡಿ, ಹಬೀಬ್ ಬೋಗೋಡಿ, ಅಶ್ರಫ್ ಯು, ತನ್ವೀರ್, ಝುಬೈರ್ ಬಂಗ್ಲೆಗುಡ್ಡೆ, ಹಫೀಝ್ ಬೋಗೋಡಿ, ಮನ್ಸೂರ್ ಬಂಗ್ಲೆಗುಡ್ಡೆ, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಆಯ್ದ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಕ್ರೀಡಾ ಸಂಘಟಕ, ಕಾರ್ಯಕ್ರಮ ಆಯೋಜಕ ಭೂಯಾ ಶರೀಫ್ ಅವರಿಗೆ ಗಲ್ಫ್ ಗೈಸ್ ವತಿಯಿಂದ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಲವಾರು ಮಂದಿ ಕ್ರೀಡಾ ಪ್ರೋತ್ಸಾಹಕರು ಕ್ರಿಕೆಟ್ ಆಟದ ವಿವಿಧ ವಿಭಾಗಗಳಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕಾಗಿ ನಗದು ಬಹುಮಾನಗಳನ್ನು ನೀಡಿ ಕ್ರಿಕೆಟ ಪಟುಗಳನ್ನು ಪ್ರೋತ್ಸಹಿಸಿದರು.
ವೈಯುಕ್ತಿಕ ಪ್ರಶಸ್ತಿಗಳು
ಎ ಟು ಝಡ್ ತಂಡ ಅನೀಸ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೀಯಿಂಗ್ ಭೂಯಾ ತಂಡದ ಆಟಗಾರರಾದ ಅಝ್ಮಲ್ ಪಿ.ಜೆ. ಅವರು ಪಂದ್ಯಶ್ರೇಷ್ಠ ಹಾಗೂ ಉತ್ತಮ ದಾಂಡಿಗ ಅವಳಿ ಪ್ರಶಸ್ತಿ ಪಡೆದುಕೊಂಡರೆ, ಜಲೀಲ್ ಜೆಬಿಸಿ ನಂದಾವರ ಅವರು ಉತ್ತಮ ಎಸೆತಗಾರರಾಗಿ ಮೂಡಿಬಂದರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ಅಝ್ಮಲ್ ಯುಎಫ್‍ಸಿ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಕೂಟದಲ್ಲಿ ಇತರ ತಂಡಗಳಾದ ರಿಯಾಝ್ ಹಾಗೂ ಶರೀಕ್ ಮಾಲಕತ್ವದ ಪ್ಲೇ ಬಾಯ್ಸ್, ರಿಝ್ವಾನ್ ಪಿಜೆ. ಹಾಗೂ ಅಬ್ದುಲ್ ರಹಿಮಾನ್ ಮಾಲಕತ್ವದ ಪಿ ಜೆ ಸ್ಟಾರ್, ಅಬ್ದುಲ್ ರಹಿಮಾನ್ ಮಾಲಕತ್ವದ ಅಯಾನ್ ವಾರಿಯರ್ಸ್ ಹಾಗೂ ತನ್ವೀರ್ ಮಾಲಕತ್ವದ ಝಮೀನ್ ಸ್ಟ್ರೈಕರ್ಸ್ ತಂಡಗಳು ಭಾಗವಹಿಸಿತ್ತು.
ಹಸೈನಾರ್ ಪಿ.ಎಂ., ಸಯ್ಯದ್ ಬೋಗೋಡಿ ವೀಕ್ಷಕ ವಿವರಣೆ ನೀಡಿದರು. ನಿಸಾರ್ ಅಕ್ಕರಂಗಡಿ ಹಾಗೂ ಅಝೀಝ್ ಬೊಳ್ಳಾಯಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಸಲಾಲ್ ಗೂಡಿನಬಳಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.
0 comments:
Post a Comment