ಸನ್ ಪ್ಯೂರ್ ಎಪಿಎಲ್ ಸೀಸನ್-5 ಕ್ರಿಕೆಟ್ ಪಂದ್ಯಾಟ : 2ನೇ ದಿನದಾಟದ ಅಂತ್ಯಕ್ಕೆ ಎ ಟು ಝಡ್ ತಂಡಕ್ಕೆ ಅಗ್ರಸ್ಥಾನ
ಬಂಟ್ವಾಳ, ಫೆ. 02, 2021 (ಕರಾವಳಿ ಟೈಮ್ಸ್) : ಪ್ರತಿಯೊಂದು ಕ್ಷೇತ್ರದಲ್ಲೂ ಕೋಮುವಾದ-ಜಾತಿವಾದ ಮೇಳೈಸುತ್ತಿರುವ ಇಂದಿನ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರ ಒಂದು ಮಾತ್ರ ಈ ಎಲ್ಲ ಕಳಂಕಗಳಿಂದ ಮುಕ್ತಗೊಂಡು ಪರಸ್ಪರ ಮನುಷ್ಯ ಮನಸ್ಸುಗಳನ್ನು ಪೋಣಿಸುವಲ್ಲಿ ಸಫಲವಾಗುತ್ತಿದೆ. ಇದನ್ನು ಯುವ ಸಮೂಹ ನಿರಂತರವಾಗಿ ಕಾಪಾಡಿಕೊಂಡು ಹೋಗುವ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಕರೆ ನೀಡಿದರು.
ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ನಡೆಯುತ್ತಿರುವ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 5ನೇ ಆವೃತ್ತಿಯ ಸನ್ ಪ್ಯೂರ್ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರೀಡಾಕೂಟದ 2ನೇ ದಿನವಾದ ಭಾನುವಾರ ರಾತ್ರಿ ನಡೆದ ಸಭಾ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯುವ ಸಮೂಹವು ದಿಟ್ಟ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಕೋಮುವಾದಿಗಳ ಎಲ್ಲಾ ಲೆಕ್ಕಾಚಾರಗಳು ಬುಡಮೇಲುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮೈದಾನದಲ್ಲಿ ಬೆಸೆಯುವ ಸೌಹಾರ್ದದ ಕೊಂಡಿಯನ್ನು ಸಮಾಜದ ಎಲ್ಲಾ ಕ್ಷೇತ್ರಗಳಿಗೂ ಯುವಕರು ವಿಸ್ತರಿಸುವ ಮೂಲಕ ಜಾತ್ಯಾತೀತತೆಯ ಸಿದ್ದಾಂತಕ್ಕೆ ಚ್ಯುತಿ ಬಾರದಂತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬೇಬಿ ಕುಂದರ್, ಕ್ರೀಡೆಯಲ್ಲಿ ಸೋಮು-ಗೆಲುವಿಗೆ ನೀಡುವ ಮಹತ್ವಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆ ಕ್ರೀಡಾಸ್ಪೂರ್ತಿಗೆ ಯುವಕರು ನೀಡಬೇಕು. ಹೀಗಾದಾಗ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆದು ಬರುತ್ತದೆ. ಆ ಮೂಲಕ ಸಮಾಜದಲ್ಲಿ, ಜೀವನದಲ್ಲಿ ಬರುವ ಎಲ್ಲಾ ಏಳು-ಬೀಳುಗಳನ್ನು ಸವಾಲಾಗಿ ಸ್ವೀಕರಿಸುವ ಎದೆಗಾರಿಕೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವಕರು ಕ್ರೀಡೆಯನ್ನು ಕೇವಲ ಮನೋರಂಜನೆಗಾಗಿ ಮಾತ್ರ ಪರಿಗಣಿಸದೆ ತಮ್ಮ ಪ್ರತಿಭೆಗಳನ್ನು ಪರಿಪೂರ್ಣವಾಗಿ ಬಳಸಿಕೊಂಡು, ಕ್ರೀಡೆಯ ಮೂಲಕವೇ ತಮ್ಮ ವೃತ್ತಿ ಬದುಕನ್ನು ಕಂಡುಕೊಳ್ಳುವ ಅವಕಾಶವನ್ನೂ ಸದುಪಯೋಗಪಡಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಉದ್ಯಮಿಗಳಾದ ಮುಹಮ್ಮದ್ ಹನೀಫ್ ಹಾಸ್ಕೋ, ಮುಹಮ್ಮದ್ ಹನೀಫ್ ಸಫಾ ಗೋಲ್ಡ್, ಅಬ್ದುಲ್ ರಹಿಮಾನ್ ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ರಫೀಕ್ ಎಂ.ಆರ್. ಬೋಗೋಡಿ, ಇಸ್ಮಾಯಿಲ್ ಬಾವಾಜಿ, ಶಮೀರ್ ಜೈ ಭಾರತ್ ನಂದಾವರ, ರಮೀಝ್ ಲಾಮೋರ್, ಫಾರೂಕ್ ಎಫ್.ಆರ್.ಕೆ., ಭುವನೇಶ್ ಬಂಗ್ಲೆಗುಡ್ಡೆ, ಆಸಿಫ್ ಗುಡ್ಡೆಅಂಗಡಿ, ಝಕರಿಯಾ ಬೋಗೋಡಿ, ರವೂಫ್ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು.
ಭೂಯಾ ಗೈಸ್ ಪದಾಧಿಕಾರಿಗಳಾದ ಹನೀಫ್, ಅಝರ್, ನೌಫಲ್ ಉಪ್ಪುಗುಡ್ಡೆ, ನೌಫಲ್ ಬಂಗ್ಲೆಗುಡ್ಡೆ, ಸಿದ್ದೀಕ್ ಪಿ.ಜೆ. ರಶೀದ್ ಕತಾರ್, ಅಝರ್ ಯು., ರಿಝ್ವಾನ್ ಪಿ.ಜೆ., ಸವಾದ್ ಬಂಗ್ಲೆಗುಡ್ಡೆ, ಇರ್ಶಾದ್ ಇಚ್ಚ, ರಿಯಾಝ್ ಆಲಡ್ಕ, ಶರೀಕ್ ಆಲಡ್ಕ, ಕೈಫ್ ಬೋಗೋಡಿ, ದಾವೂದ್ ಬೋಗೋಡಿ, ಹಬೀಬ್ ಬೋಗೋಡಿ, ಅಶ್ರಫ್ ಯು, ಚಪ್ಪು ಮಂಚಿ, ತನ್ವೀರ್, ಝುಬೈರ್ ಬಂಗ್ಲೆಗುಡ್ಡೆ, ಹಫೀಝ್ ಬೋಗೋಡಿ, ರಾಫಿದ್ ಬೋಗೋಡಿ, ಮನ್ಸೂರ್ ಬಂಗ್ಲೆಗುಡ್ಡೆ, ಇಕ್ಬಾಲ್ ಸಜಿಪ, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ಅಝ್ಮಲ್ ಯುಎಫ್‍ಸಿ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ £ರೂಪಿಸಿದರು.
2ನೇ ದಿನದಾಟದ ಅಂತ್ಯಕ್ಕೆ ಎ ಟು ಝಡ್ ತಂಡಕ್ಕೆ ಅಗ್ರಸ್ಥಾನ
ಕ್ರೀಡಾ ಕೂಟದ 2ನೇ ದಿನದ ಆಟ ಅಂತ್ಯಕ್ಕೆ 3 ಪಂದ್ಯಗಳನ್ನು ಆಡಿ ಮೂರರಲ್ಲೂ ಜಯ ಸಾಧಿಸಿದ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದು, ಹಕೀಂ ಹಾಗೂ ಅಶ್ರಫ್ ಮಾಲಕತ್ವದ ಬೀಯಿಂಗ್ ಭೂಯಾ ತಂಡವು ತಾನಾಡಿದ 4 ಪಂದ್ಯಗಳಿಂದ 3 ರಲ್ಲಿ ಜಯ ಸಾಧಿಸಿ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದಂತೆ ಅಬ್ದುಲ್ ರಹಿಮಾನ್ ಮಾಲಕತ್ವದ ಅಯಾನ್ ವಾರಿಯರ್ಸ್3 ಪಂದ್ಯಗಳನ್ನಾಡಿ 2 ಜಯದೊಂದಿಗೆ 4 ಅಂಕಗಳನ್ನು ಸಂಪಾದಿಸಿದರೆ, ರಿಝ್ವಾನ್ ಪಿಜೆ. ಹಾಗೂ ಅಬ್ದುಲ್ ರಹಿಮಾನ್ ಮಾಲಕತ್ವದ ಪಿ ಜೆ ಸ್ಟಾರ್ 2 ಪಂದ್ಯಗಳನ್ನು ಆಡಿ 1 ರಲ್ಲಿ ಜಯಗಳಿಸಿ 2 ಅಂಕಗಳನ್ನು ಸಂಪಾದಿಸಿದೆ. ರಿಯಾಝ್ ಹಾಗೂ ಶರೀಕ್ ಮಾಲಕತ್ವದ ಪ್ಲೇ ಬಾಯ್ಸ್, ಹಾಗೂ ತನ್ವೀರ್ ಮಾಲಕತ್ವದ ಝಮೀನ್ ಸ್ಟ್ರೈಕರ್ಸ್ ಕ್ರಮವಾಗಿ 3 ಹಾಗೂ 4 ಪಂದ್ಯಗಳನ್ನು ಆಡಿದ್ದು, ಟೈ ಪಂದ್ಯದೊಂದಿಗೆ ತಲಾ 1 ಅಂಕಗಳನ್ನು ಮಾತ್ರ ಸಂಪಾದಿಸಿದೆ.
ಇನ್ನು ಲೀಗ್ ಹಂತದಲ್ಲಿ ಒಟ್ಟು 5 ಪಂದ್ಯಾಟಗಳು ಬಾಕಿ ಇದ್ದು, ಬಳಿಕ ಪ್ಲೇ ಆಪ್ ಪಂದ್ಯಗಳು ಹಾಗೂ ಪ್ರಶಸ್ತಿ ಹಂತದ ಪಂದ್ಯಾಟಗಳು ಮಾರ್ಚ್ 13 ರ ಶನಿವಾರ ಹಾಗೂ 14 ರ ಭಾನುವಾರ ಹಗಲು ವೇಳೆ ನಡೆಯಲಿದೆ.
ಹಸೈನಾರ್ ಪಿ.ಎಂ., ಇರ್ಶಾನ್ ಪಾಣೆಮಂಗಳೂರು ವೀಕ್ಷಕ ವಿವರಣೆ ನೀಡಿದರು. ಪ್ರಶಾಂತ್ ಬಂಟ್ವಾಳ, ಶ್ರವಣ್ ಬಂಟ್ವಾಳ, ಶಾಲಿ ಮೆಲ್ಕಾರ್ ತೀರ್ಪುಗಾರರಾಗಿ ಸಹಕರಿಸಿದರು. ಸಲಾಲ್ ಗೂಡಿನಬಳಿ ಸ್ಕೋರರ್ ಆಗಿ ಕಾರ್ಯ£ರ್ವಹಿಸಿದರು.
2 March 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment