ಸರಕಾರ ಕೈ ಕಟ್ಟಿ ಕುಳಿತರೆ ಕೊರೋನಾ ಮಹಾಸ್ಫೋಟ : ತಜ್ಞರ ಸಮಿತಿ ಗಂಭೀರ ಎಚ್ಚರಿಕೆ, ಕಠಿಣ ಲಾಕ್ ಇಲ್ಲದಿದ್ದರೂ ಸೆಮಿ ಲಾಕ್ ಡೌನ್ ಬಗ್ಗೆ ಸಮಿತಿ ಸಲಹೆ - Karavali Times ಸರಕಾರ ಕೈ ಕಟ್ಟಿ ಕುಳಿತರೆ ಕೊರೋನಾ ಮಹಾಸ್ಫೋಟ : ತಜ್ಞರ ಸಮಿತಿ ಗಂಭೀರ ಎಚ್ಚರಿಕೆ, ಕಠಿಣ ಲಾಕ್ ಇಲ್ಲದಿದ್ದರೂ ಸೆಮಿ ಲಾಕ್ ಡೌನ್ ಬಗ್ಗೆ ಸಮಿತಿ ಸಲಹೆ - Karavali Times

728x90

21 March 2021

ಸರಕಾರ ಕೈ ಕಟ್ಟಿ ಕುಳಿತರೆ ಕೊರೋನಾ ಮಹಾಸ್ಫೋಟ : ತಜ್ಞರ ಸಮಿತಿ ಗಂಭೀರ ಎಚ್ಚರಿಕೆ, ಕಠಿಣ ಲಾಕ್ ಇಲ್ಲದಿದ್ದರೂ ಸೆಮಿ ಲಾಕ್ ಡೌನ್ ಬಗ್ಗೆ ಸಮಿತಿ ಸಲಹೆ


ಬೆಂಗಳೂರು, ಮಾ. 21, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ತಜ್ಞರನ್ನೊಳಗೊಂಡ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಕಠಿಣ ಎಚ್ಚರಿಕೆ ರವಾನಿಸಿದೆ. ಸರಕಾರ ಇದೇ ರೀತಿ ಕೈ ಕಟ್ಟಿ ಕುಳಿತರೆ ಮುಂದಿನ ದಿನಗಳಲ್ಲ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದೆ. 

ಕಳೆದ ಐದು ದಿನಗಳಿಂದಲೂ ಒಂದೂವರೆ ಸಾವಿರಕ್ಕೂ ಹೆಚ್ಚು ಪಾಸಿಟಿವ್ ವರದಿಗಳು ದಾಖಲಾಗಿವೆ. ಭಾನುವಾರ ಒಂದೇ ದಿನ 1,715 ಮಂದಿಗೆ ಸೋಂಕು ಬಾಧಿಸಿದ್ದು, 2 ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕಠಿಣ ಮಾರ್ಗಸೂಚಿ ಕೈಗೊಳ್ಳುವ ಬಗ್ಗೆ ಸಮಿತಿ ಶಿಫಾರಸ್ಸು ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಾಕ್‍ಡೌನ್ ಬದಲಿಗೆ 2 ವಾರಗಳ ಮಟ್ಟಿಗೆ ಸೆಮಿ ಲಾಕ್‍ಡೌನ್ ಹೇರುವ ಬಗ್ಗೆ ಸಲಹೆ ನೀಡಿದೆ ಎನ್ನಲಾಗಿದೆ. 

ಈ ಕುರಿತಂತೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಿರಿಯ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. 

ರಾಜ್ಯದಲ್ಲಿ ಸರಕಾರ ಜಾತ್ರೆ, ಸಾರ್ವಜನಿಕ ಸಭೆ-ಸಮಾರಂಭಗಳನ್ನು ಸಂಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಬೇಕು. ಈಜು ಕೊಳ, ಪಾರ್ಕ್, ಜಿಮ್‍ಗಳನ್ನು ಬಂದ್ ಮಾಡಬೇಕು. ಶಾಲೆ-ಕಾಲೇಜುಗಳ ಬಗ್ಗೆ ಮರು ಯೋಚನೆ ಮಾಡಬೇಕು. ಮದುವೆ ಕಾರ್ಯಕ್ರಮಗಳಿಗೆ 100 ಜನರಿಗಷ್ಟೇ ಅವಕಾಶ ನೀಡಬೇಕು. ಹೊರಾಂಗಣ ಕಾರ್ಯಕ್ರಮಕ್ಕೆ 200 ಜನರಿಗಷ್ಟೇ ಅವಕಾಶ ಮತ್ತು ಥಿಯೇಟರ್‍ಗಳಲ್ಲಿ ಶೇ. 50 ರಷ್ಟು ಭರ್ತಿಗಷ್ಟೇ ಅವಕಾಶ ನೀಡಬೇಕು. ಮಾಲ್, ಮಾರುಕಟ್ಟೆ, ದೇವಾಲಯಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. 

ಆದರೆ ತಾಂತ್ರಿಕ ಸಲಹಾ ಸಮಿತಿ 2 ವಾರಗಳ ಮಟ್ಟಿಗೆ ಸೆಮಿ ಲಾಕ್‍ಡೌನ್ ರೀತಿ ಕಠಿಣ ನಿಯಮಗಳ ಜಾರಿಗೆ ಸಲಹೆ ನೀಡಿದ್ದರೂ ಇತ್ತ ಸರಕಾರ ಹಾಗೂ ಮಂತ್ರಿಗಳು ಮಾತ್ರ ಗೊಂದಲಕಾರಿ ನಡೆಯನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪರ್ಪ, ಸಚಿವರುಗಳಾದ ಡಾ ಸುಧಾಕರ, ಆರ್. ಅಶೋಕ್, ಸುರೇಶ್ ಕುಮಾರ್ ಮೊದಲಾದವರು ಭಿನ್ನ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರಲ್ಲದೆ ಸರಕಾರದ ಸಚಿವರು ಹಾಗೂ ಅಧಿಕಾರಿಗಳು ಕನಿಷ್ಠ ಮಾಸ್ಕ್ ಧರಿಸುವುದಕ್ಕೂ ಹಿಂದೆ ಮುಂದೆ ನೋಡುತ್ತಿರುವ ಬಗ್ಗೆಯೂ ಸಮಿತಿ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸರಕಾರ ಇದೇ ರೀತಿ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಮತ್ತೆ ಕೊರೋನಾ ಹೆಚ್ಚಾದಾಗ ಸಂಪೂರ್ಣ ಲಾಕ್‍ಡೌನ್ ಅನಿವಾರ್ಯತೆ ಎದುರಾಗಬಹುದು ಎಂಬ ಭೀತಿಯನ್ನೂ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ತಜ್ಞರ ಸಲಹೆ ಬಗ್ಗೆ ಇವತ್ತೇ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಕೊರೊನಾ 2ನೇ ಅಲೆ ಆರಂಭದಲ್ಲಿ ಇದ್ದೇವೆ. ಸಲಹಾ ಸಮಿತಿಯ ಸಲಹೆ ಪಾಲನೆಗೆ ಮುಂದಾಗುತ್ತೇವೆ. ಕೊರೊನಾ ಯಾವುದಕ್ಕೂ ರಿಯಾಯಿತಿ ಕೊಡಲ್ಲ. ತಜ್ಞರ ಸಲಹೆ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದಿದ್ದಾರೆ. 

ರಾಜ್ಯದಲ್ಲಿ ಈಗಾಗಲೇ ಕೊರೋನಾ ಆರ್ಭಟ ಕೈ ಮೀರುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಕೊರೊನಾ ಮಹಾಸ್ಫೋಟವಾಗುವ ಸಾಧ್ಯತೆ ಬಗ್ಗೆಯೂ ತಜ್ಞರ ಸಮಿತಿ ಬೊಟ್ಟು ಮಾಡಿದೆ. ಮುಂದಿನ 3 ತಿಂಗಳು ಕೊರೊನಾ ನಿರಂತರವಾಗಿ ಏರಿಕೆ ಆಗಲಿದ್ದು, ಹೀಗಾಗಿ ಗಂಭೀರ ಎಚ್ಚರಿಕೆ ಅಗತ್ಯ ಎಂದು ಸಮಿತಿ ಒತ್ತಿ ಹೇಳಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸರಕಾರ ಕೈ ಕಟ್ಟಿ ಕುಳಿತರೆ ಕೊರೋನಾ ಮಹಾಸ್ಫೋಟ : ತಜ್ಞರ ಸಮಿತಿ ಗಂಭೀರ ಎಚ್ಚರಿಕೆ, ಕಠಿಣ ಲಾಕ್ ಇಲ್ಲದಿದ್ದರೂ ಸೆಮಿ ಲಾಕ್ ಡೌನ್ ಬಗ್ಗೆ ಸಮಿತಿ ಸಲಹೆ Rating: 5 Reviewed By: karavali Times
Scroll to Top