ಪುತ್ತೂರು, ಮಾ. 25, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಪೇಟೆಯಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್ ಚಿನ್ನಾಭರಣದ ಅಂಗಡಿಯ ಮುಂಭಾಗದ ರೋಲಿಂಗ್ ಶೆಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಲಕ್ಷಾತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬುಧವಾರ ರಾತ್ರಿ ವೇಳೆ ನಡೆದಿದೆ.
ಕಳ್ಳರು ಅಂದಾಜು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುತ್ತಾರೆ ಎಂದು ಅಂಗಡಿ ಮಾಲಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 380, 457 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ. ಇದೇ ವೇಳೆ ಅಲ್ಲೇ ಪಕ್ಕದ ಶ್ರೀ ನವಮಿ ಜ್ಯುವೆಲ್ಲರ್ಸ್ ಹಾಗೂ ಹಿರಣ್ಯ ಮೆಷಿನ್ ಕಟ್ಟಿಂಗ್ಸ್ ಆಂಡ್ ಜ್ಯುವೆಲ್ಲರ್ಸ್ ಅಂಗಡಿಗಳಲ್ಲೂ ಕಳ್ಳತನ ಯತ್ನ ನಡೆದಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಈ ಕಳವು ಕೃತ್ಯ ನಡೆದಿರುವುದು ಇದೀಗ ಪೇಟೆಯ ಜನರ ಆತಂಕಕ್ಕೆ ಕಾರಣವಾಗಿದೆ.
0 comments:
Post a Comment