ರಿಯಾದ್, ಮಾ. 26, 2021 (ಕರಾವಳಿ ಟೈಮ್ಸ್) : ಎಪ್ರಿಲ್ ದ್ವಿತೀಯ ವಾರದಲ್ಲಿ ಪ್ರಾರಂಭಗೊಳ್ಳುವ ಮುಸ್ಲಿಮರ ಪವಿತ್ರ ತಿಂಗಳು ರಂಝಾನಿನಲ್ಲಿ ಆಡಂಬರದ ಇಫ್ತಾರ್ ಕೂಟಗಳಿಗೆ ಬ್ರೇಕ್ ಹಾಕಿ ಸೌದಿ ಸರಕಾರ ಆದೇಶ ಹೊರಡಿಸಿದೆ.
ದೇಶದ ರೆಸ್ಟೋರೆಂಟ್‍ಗಳು, ಹೋಟೆಲ್‍ಗಳಲ್ಲಿ ಯಾವುದೇ ಇಫ್ತಾರ್ ಹಾಗೂ ಸಹರಿ ಕೂಟಗಳಿಗೆ ಅನುಮತಿ ನಿರಾಕರಿಸಿರುವ ಸೌದಿ ಅರೇಬಿಯಾ ಸರಕಾರ ಮಸೀದಿ ಮೊದಲಾದ ಧಾರ್ಮಿಕ ಸ್ಥಳಗಳಲ್ಲೂ ಸಾರ್ವಜನಿಕ ಇಫ್ತಾರ್ ಕೂಟ ಆಯೋಜಿಸುವಂತಿಲ್ಲ ಎಂದು ಘೋಷಣೆ ಮಾಡಿದೆ.
ರಂಝಾನ್ ಹಾಗೂ ಈದುಲ್ ಫಿತ್ರ್ ಸಂದರ್ಭಗಳಲ್ಲಿ ಕೋವಿಡ್ ಮಾರಕ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಸೌದಿ ಸರಕಾರ ಈ ಆದೇಶ ಹೊರಡಿಸಿದೆ ಎನ್ನಲಾಗಿದೆ. ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಸಚಿವಾಲಯಗಳಿಗೂ ಸರಕಾರ ಸುತ್ತೋಲೆ ಹೊರಡಿಸಿದೆ.
0 comments:
Post a Comment