ಕೋವಿಡ್ ಹೆಚ್ಚಳ ಆತಂಕ : ತಡರಾತ್ರಿ ಪಾರ್ಟಿ ಹಾಗೂ ದೊಡ್ಡ ಮಟ್ಟದ ಮದುವೆ, ಔತಣ ಕೂಟಗಳಿಗೆ ಸರಕಾರದಿಂದ ನಿರ್ಬಂಧ ಆದೇಶ - Karavali Times ಕೋವಿಡ್ ಹೆಚ್ಚಳ ಆತಂಕ : ತಡರಾತ್ರಿ ಪಾರ್ಟಿ ಹಾಗೂ ದೊಡ್ಡ ಮಟ್ಟದ ಮದುವೆ, ಔತಣ ಕೂಟಗಳಿಗೆ ಸರಕಾರದಿಂದ ನಿರ್ಬಂಧ ಆದೇಶ - Karavali Times

728x90

11 March 2021

ಕೋವಿಡ್ ಹೆಚ್ಚಳ ಆತಂಕ : ತಡರಾತ್ರಿ ಪಾರ್ಟಿ ಹಾಗೂ ದೊಡ್ಡ ಮಟ್ಟದ ಮದುವೆ, ಔತಣ ಕೂಟಗಳಿಗೆ ಸರಕಾರದಿಂದ ನಿರ್ಬಂಧ ಆದೇಶ


ಬೆಂಗಳೂರು, ಮಾ. 12, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲೂ ಕೋವಿಡ್ ವೈರಸ್ ಮತ್ತೆ ಅಟ್ಟಹಾಸ ಮೆರೆಯುತ್ತಿರುವ ಹಿನ್ನಲೆಯಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುನ್ಸೂಚನೆ ನೀಡುತ್ತಿದೆ. ಇದೀಗ ಮೊದಲ ಕ್ರಮವಾಗಿ ರಾಜ್ಯ ಸರಕಾರ ತಡರಾತ್ರಿಯ ಎಲ್ಲಾ ಪಾರ್ಟಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ತಡ ರಾತ್ರಿ, ಮಧ್ಯರಾತ್ರಿ ನಡೆಯುವ ಎಲ್ಲಾ ರೀತಿಯ ಪಾರ್ಟಿಗಳನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಇಂತಹ ಪಾರ್ಟಿಗಳು ಸೂಪರ್ ಸ್ಪ್ರೆಡರ್ ಇವೆಂಟ್‍ಗಳಾಗಿ ಪರಿಣಮಿಸಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸಚಿವ ಸುಧಾಕರ್ ಅವರು, ಕೊರೋನಾ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಟಾರ್ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳೂ ಸೇರಿದಂತೆ ಹೋಟೆಲ್‍ಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರವು ತಡರಾತ್ರಿ ಪಾರ್ಟಿಗಳನ್ನು ನಿಷೇಧಿಸಿದೆ. ಏಕೆಂದರೆ ಅಂತಹ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಅಲ್ಲದೆ, ನೆರೆಯ ರಾಜ್ಯಗಳು ಕೋವಿಡ್-19 ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ಆದ್ದರಿಂದ, ಬೆಂಗಳೂರಿನಲ್ಲಿ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ಇನ್ನು ಮುಂದೆ ಮದುವೆ ಸಮಾರಂಭಗಳಲ್ಲೂ ಮತ್ತು ಇತರ ರೀತಿಯ ಸಮಾರಂಭಗಳಲ್ಲೂ ದೊಡ್ಡ ಮಟ್ಟದ ಔತಣ ಕೂಟಗಳನ್ನು ನಿರ್ಬಂಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದ ಸಚಿವರು ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸ್ಪಷ್ಟಪಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್ ಹೆಚ್ಚಳ ಆತಂಕ : ತಡರಾತ್ರಿ ಪಾರ್ಟಿ ಹಾಗೂ ದೊಡ್ಡ ಮಟ್ಟದ ಮದುವೆ, ಔತಣ ಕೂಟಗಳಿಗೆ ಸರಕಾರದಿಂದ ನಿರ್ಬಂಧ ಆದೇಶ Rating: 5 Reviewed By: karavali Times
Scroll to Top