ಬಂಟ್ವಾಳ, ಮಾ. 31, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿಲ ಗ್ರಾಮ ಪಂಚಾಯತಿನಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ರಾಜೇಶ್ ಬಾಳೆಕಲ್ಲು ಅವರು ಒಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಷ್ಣುಕುಮಾರ್ ಕೊಮ್ಮುಂಜೆ ಜಯಭೇರಿ ಭಾರಿಸಿದ್ದಾರೆ.
ವಾರ್ಡಿನಲ್ಲಿ ಒಟ್ಟು 1025 ಮತದಾರರ ಪೈಕಿ 637 ಮಂದಿ ಮತದಾನ ಮಾಡಿದ್ದರು. ಈ ಪೈಕಿ ವಿಷ್ಣು ಕುಮಾರ್ 364 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಉಳಿದಂತೆ ಸೂರಜ್ ರೈ 226 ಹಾಗೂ ಮೊಯ್ದಿನ್ ಕುಟ್ಟಿ ನಾಯರ್ ಮೂಲೆ ಅವರು 41 ಮತಗಳನ್ನು ಪಡೆದಿದ್ದಾರೆ. 6 ಮತಗಳು ತಿರಸ್ಕøತಗೊಂಡಿದೆ.
ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಆರಂಭದಲ್ಲಿ ಒಟ್ಟು 8 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಈ ಪೈಕಿ ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆದಿದ್ದರು. ಅಂತಿಮವಾಗಿ ಕಣದಲ್ಲಿ ಮೊಯ್ದಿನ್ ಕುಂಞÂ, ವಿಷ್ಣುಕುಮಾರ್ ಕೊಮ್ಮುಂಜೆ ಹಾಗೂ ಸೂರಜ್ ರೈ ಉಳಿದಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಮಾಣಿಲ ಪಂಚಾಯತಿನ ಒಂದು ಸ್ಥಾನ ಹಾಗೂ ಪುದು ಪಂಚಾಯತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿತ್ತು. ಈ ಪೈಕಿ ಪುದು ಗ್ರಾ.ಪಂ.ನಲ್ಲಿ ವೀಣಾ ಅವರು ಅವಿರೋಧ ಆಯ್ಕೆಯಾಗಿದ್ದರು. ಮಾಣಿಲದಲ್ಲಿ ಮಾತ್ರ ಚುನಾವಣೆ ನಡೆದಿತ್ತು.
ಚುನಾವಣಾಧಿಕಾರಿಯಾಗಿ ಪ್ರವೀಣ್ ಜೋಷಿ ಮೆಸ್ಕಾಂ ಬಂಟ್ವಾಳ, ಸಹಾಯಕ ಚುನಾವಣಾಧಿಕಾರಿ ಅಶೋಕ್ ಎನ್.ಜಿ. (ಪಿಡಿಒ), ಚುನಾವಣಾ ಉಪತಹಸೀಲ್ದಾರ್ ಕೆ. ಸಿದ್ದರಾಜು, ಮತ ಎಣಿಕೆ ಮೇಲ್ವಿಚಾರಕರಾಗಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್, ಮತ ಎಣಿಕೆ ಸಹಾಯಕರಾದ ಸೀತಾರಾಮ ಪೂಜಾರಿ ಕಮ್ಮಾಜೆ, ವಿಶುಕುಮಾರ್, ಹಾಗೂ ಚುನಾವಣಾ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್, ಕಾರ್ತಿಕ್ ಹಾಗೂ ಮಾಣಿಲ ಗ್ರಾಮ ಲೆಕ್ಕಾಧಿಕಾರಿ ಶಿವನಾಂದ ನಾಟೇಕರ್, ಚುನಾವಣಾ ಕಚೇರಿ ಸಿಬ್ಬಂದಿಗಳಾದ ಚಂದು, ಕಿರಣ್ ಅವರು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
0 comments:
Post a Comment