ಮಂಗಳೂರು, ಮಾ. 16, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ಸೋಮವಾರ (ಮಾರ್ಚ್ 15, 2021) ನಡೆದ ಮಹಿಳಾ ಕ್ರೀಡಾಕೂಟ-2021 ರ ತ್ರೋಬಾಲ್ ಪಂದ್ಯಾಟದಲ್ಲಿ ಮಂಗಳೂರಿನ ಮಕ್ಕಿಮನೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಮೋನಿಷಾ, ಪ್ರಜ್ವಿತ, ಪೂಜಾ ಡಿ., ವಿಜೇತಾ, ಅನನ್ಯ, ಹರ್ಷಿತಾ ಆರ್., ಸಂಜನಾ, ತಪಸ್ವಿ, ರಕ್ಷಿತಾ, ಲೀಶಲ್, ನಿರೀಕ್ಷಾ, ವಿಜಯಲಕ್ಷ್ಮಿ ಪೈ, ಶಿಲ್ಪ ರಾವ್ ಪ್ರದರ್ಶನ ನೀಡಿದ್ದಾರೆ. ತಂಡದ ಮುಖ್ಯಸ್ಥ ಸುದೇಶ್ ಜೈನ್ ಮಕ್ಕಿಮನೆ ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭ ದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪ್ರಮುಖರಾದ ಧನಲಕ್ಷಿ ಗಟ್ಟಿ, ಸಂಧ್ಯಾ ಎಂ. ಆಚಾರ್, ಪ್ರದೀಪ್ ಡಿ’ಸೋಜ, ವಿನೋದ್ ಕುಮಾರ್ ಸಸಿಹಿತ್ಲು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment