ಮಂಗಳೂರು, ಮಾ. 02, 2021 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಮಾರ್ಚ್ 11 ರಂದು 11 ಗಂಟೆಗೆ ಮಂಗಳೂರು ಅಂಚೆ ವಿಭಾಗದ ಬಲ್ಮಠದಲ್ಲಿರುವ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆ ಹಾಗೂ ತಕರಾರುಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮೂಲಕ “ಅಂಚೆ ಅದಾಲತ್” ತಲೆಬರಹದಡಿಯಲ್ಲಿ ಮಾರ್ಚ್ 8ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಬಲ್ಮಠ ಮಂಗಳೂರು 575002” ವಿಳಾಸಕ್ಕೆ ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072 ಗೂ ಕಳುಹಿಸಬಹುದು. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಕಳುಹಿಸುವಂತೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಅವರ ಪ್ರಕಟಣೆ ತಿಳಿಸಿದೆ.
2 March 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment