ಬೆಂಗಳೂರು, ಮಾ. 05, 2021 (ಕರಾವಳಿ ಟೈಮ್ಸ್) : ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ಪೆÇಲೀಸ್ ಸಿಬ್ಬಂದಿ ರಸ್ತೆ ಮಧ್ಯಭಾಗದಲ್ಲಿ ವಾಹನಗಳಿಗೆ ಏಕಾಏಕಿ ಅಡ್ಡಬಂದು ದಾಖಲೆ ಕೇಳುವಂತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಎಂ. ರಮೇಶ್‍ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿಸಿಟಿವಿ ಕ್ಯಾಮೆರಾ ಇಲ್ಲದ ಕಡೆಗಳಲ್ಲಿ ಸಿಗ್ನಲ್ ಜಂಪ್, ಅತಿ ವೇಗ ವಾಹನಗಳನ್ನು ಪತ್ತೆಹಚ್ಚಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನ ಮತ್ತು ಸವಾರರನ್ನು ಹಿಡಿಯಲು ಪೆÇಲೀಸರು ರಸ್ತೆಯಲ್ಲಿ ಅಡ್ಡಬರುವುದು ಗಮನಕ್ಕೆ ಬಂದಿದೆ. ಅಂತಹ ಸಂದರ್ಭದಲ್ಲಿ ಅಪಘಾತವಾಗದಂತೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದವರು ಹೇಳಿದರು.
ಸದ್ಯ, ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ವಲಯ ಇವೆ. ಹೊಸದಾಗಿ, ನಾಲ್ಕನೇ ವಲಯ ಅಥವಾ ದಕ್ಷಿಣ ವಲಯ ರಚಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೆÇಲೀಸ್ ಠಾಣೆಗಳ ವ್ಯಾಪ್ತಿಯನ್ನು ಶೀಘ್ರವೇ ಮರು ರಚಿಸಲಾಗುವುದು ಎಂದು ಹೇಳಿದ ಬೊಮ್ಮಾಯಿ, ಈ ಸಂಬಂಧ ಪೆÇಲೀಸ್ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸಮಿತಿಯಿಂದ ವರದಿ ಬರಲಿದ್ದು, ಪೆÇಲೀಸ್ ಠಾಣೆಗಳ ಗಡಿ ಪುನರ್‍ರಚಿಸಲಾಗುವುದು ಎಂದರು.
0 comments:
Post a Comment