ಬಂಟ್ವಾಳ, ಮಾ. 21, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ವತಿಯಿಂದ ವಿಟ್ಲದ ಗ್ಯಾರೇಜಿನಲ್ಲಿ ನಡೆದ ಬೆಂಕಿ ಅವಘಡದಿಂದ ಅಪಾರ ನಷ್ಟಕ್ಕೊಳಗಾದ ವಿಟ್ಲ ಗ್ಯಾರೇಜು ಮಾಲಕರ ಸಂಘದ ಗೌರವಾಧ್ಯಕ್ಷ ಹರೀಶ್ ಆಚಾರ್ಯ ಅವರಿಗೆ 65 ಸಾವಿರ ರೂಪಾಯಿ ಸಹಾಯ ಧನ ವಿತರಿಸಲಾಯಿತು.
ಈ ಸಂಧರ್ಭ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ಕೋಶಾಧಿಕಾರಿ ರಾಜೇಶ್ ಕುಲಾಲ್, ಗೌರವ ಸಲಹೆಗಾರರಾದ ಸುಧಾಕರ್ ಸಾಲ್ಯಾನ್, ರಾಜೇಶ್ ಸಾಲ್ಯಾನ್, ಉಪಾಧ್ಯಕ್ಷರಾದ ನವೀನ್ ಕುಲಾಲ್, ಪ್ರಸಾದ್ ಬಂಗೇರ, ಸಂಘಟನಾ ಕಾರ್ಯದರ್ಶಿ ಸುಧೀರ್ ಬೈಪಾಸ್, ಜಗದೀಶ್ ರೈ, ಜೊತೆ ಕಾಯುಧರ್ಶಿ ರಮೇಶ್ ಬೈಪಾಸ್, ಕ್ರೀಡಾ ಕಾರ್ಯದರ್ಶಿ ಭಾಸ್ಕರ್ ಕುಲಾಲ್, ನಾರಾಯಣ್ ಪೂಜಾರಿ, ಜಿಲ್ಲಾ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ಕಾರ್ಯದರ್ಶಿ ಪುರೋಷೋತ್ತಮ್ ಕಾಮಿಲ, ವಿಟ್ಲ ವಲಯಾಧ್ಯಕ್ಷ ಕೆ ಬಾಬು ಹಾಗೂ ಬಂಟ್ವಾಳ, ವಿಟ್ಲ, ಮಂಗಳೂರು ವಲಯದ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
0 comments:
Post a Comment