ನವದೆಹಲಿ, ಮಾ. 19, 2021 (ಕರಾವಳಿ ಟೈಮ್ಸ್) : ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಮಧ್ಯೆ ಫ್ರಾನ್ಸ್ ಹಾಗೂ ಇಟಲಿಯಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭಿಸಿ ಘೋಷಿಸಲಾಗಿದೆ.
ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್‍ನಲ್ಲೂ ಮಾರ್ಚ್ 17 ರಿಂದ ಲಾಕ್‍ಡೌನ್ ಮಾಡುವ ಬಗ್ಗೆ ಈಗಾಗಲೇ ನಿರ್ಧಾರ ಹೊರಬಿದ್ದಿದೆ. ಜರ್ಮನಿಯಲ್ಲೂ ಕೊರೊನಾ ಅಲೆ ಜೋರಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸೀಮಿತ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲು ಜರ್ಮನಿ ಸರಕಾರ ನಿರ್ಧರಿಸಿದೆ, ಹಂಗೇರಿಯಲ್ಲಿ ನೈಟ್ ಕಫ್ರ್ಯೂ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಪೆÇೀಲ್ಯಾಂಡ್‍ನಲ್ಲಿ ಥಿಯೇಟರ್, ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಮತ್ತೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.
ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೀಮಿತ ಪ್ರದೇಶಗಳ ಲಾಕ್ ಡೌನ್ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದಲ್ಲಿ ಕಳೆದ ಒಂದೇ ದಿನದಲ್ಲಿ 1488 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 925 ಪ್ರಕರಣ ಪತ್ತೆಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಸಿಎಂ, ಸಚಿವರಾದಿಯಾಗಿ ಲಾಕ್ ಡೌನ್ ಹಾಗೂ ಕಠಿಣ ಮಾರ್ಗಸೂಚಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು, ಯಾವುದೇ ಕ್ಷಣದಲ್ಲೂ ಕಠಿಣ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
0 comments:
Post a Comment