ಬಂಟ್ವಾಳ, ಮಾ. 20, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಕೋವಿಡ್ ಲಸಿಕಾ ಜಾಗೃತಿ ಸಭೆ ನಡೆದಿದ್ದು, ಸಭೆಗೆ ತಾಲೂಕು ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಮುಂಚೂಣಿ ಅಧಿಕಾರಿಗಳೇ ಗೈರಾಗಿರುವ ಬಗ್ಗೆ ಪುರಸಭಾ ಸದಸ್ಯರುಗಳೇ ತೀವ್ರ ಗರಂ ಆಗಿ ಸಭೆಗೆ ಹಾಜರಾದ ಕೋವಿಡ್ ನೋಡಲ್ ಅಧಿಕಾರಿಗಳನ್ನು ತರಾಟೆಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸಭೆಗೆ ಹೆಚ್ಚಿನ ಪುರಸಭಾ ಸದಸ್ಯರುಗಳೂ ಕೂಡಾ ಗೈರು ಹಾಜರಾಗಿದ್ದು, ಬೆರಳೆಣಿಕೆಯಷ್ಟು ಮಂದಿ ಸದಸ್ಯರುಗಳು ಮಾತ್ರ ಹಾಜರಾಗಿದ್ದರು.
ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನೂ ಆಹ್ವಾನಿಸದ ಬಗ್ಗೆಯೂ ಪ್ರಶ್ನಿಸಿದ ಪುರಸಭಾ ಸದಸ್ಯರು ಮಾಧ್ಯಮ ಹೊರಗಿಟ್ಟು ನಡೆಸುವ ಸಭೆಗಳಿಂದ ಅದೇಗೆ ಲಸಿಕಾ ಜಾಗೃತಿ ಮೂಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಹಾಗೂ ಮಾಧ್ಯಮಗಳನ್ನು ಹೊರಗಿಟ್ಟು ನಡೆಸುವ ಈ ಸಭೆ ಕಾಟಾಚಾರಕ್ಕೋ ಅಥವಾ ಕೋವಿಡ್ ಎರಡನೇ ಹಂತದ ನಾಟಕವೋ ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಸದಸ್ಯರು ಕೋವಿಡ್ ನೋಡಲ್ ಅಧಿಕಾರಿಗಳು ಪ್ರಶ್ನಿಸಿ ತರಾಟೆಗೆಳೆದರು ಎನ್ನಲಾಗಿದೆ.
ಸದಸ್ಯರುಗಳಾದ ವಾಸು ಪೂಜಾರಿ, ಮೂನಿಶ್ ಅಲಿ, ಜನಾರ್ದನ ಚೆಂಡ್ತಿಮಾರ್, ಸಿದ್ದೀಕ್ ಮೊದಲಾದವರು ನೋಡಲ್ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಸದಸ್ಯರ ಪ್ರಶ್ನೆಗಳಿಗೆ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಗಳಾದ ಡಾ ಅಶೋಕ್ ಹಾಗೂ ಡಾ ಜಗದೀಶ್ ಅವರು ನಿರುತ್ತರರಾದರು ಎಂದು ತಿಳಿದು ಬಂದಿದೆ. ಡಾ. ತುಫೈಲ್ ಅಹ್ಮದ್ ಹಾಗೂ ಡಾ ಅಶ್ವಿನಿ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
0 comments:
Post a Comment