ದೂಡಿ ನೆಲಕ್ಕೆ ಬೀಳಿಸಿದ್ದು ಮಾತ್ರವಲ್ಲ, ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿದ ವರ್ತನೆ ಬಿಜೆಪಿ ಸರಕಾರದ್ದು : ರಮಾನಾಥ ರೈ ವಾಗ್ದಾಳಿ - Karavali Times ದೂಡಿ ನೆಲಕ್ಕೆ ಬೀಳಿಸಿದ್ದು ಮಾತ್ರವಲ್ಲ, ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿದ ವರ್ತನೆ ಬಿಜೆಪಿ ಸರಕಾರದ್ದು : ರಮಾನಾಥ ರೈ ವಾಗ್ದಾಳಿ - Karavali Times

728x90

1 March 2021

ದೂಡಿ ನೆಲಕ್ಕೆ ಬೀಳಿಸಿದ್ದು ಮಾತ್ರವಲ್ಲ, ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿದ ವರ್ತನೆ ಬಿಜೆಪಿ ಸರಕಾರದ್ದು : ರಮಾನಾಥ ರೈ ವಾಗ್ದಾಳಿ

ಬಂಟ್ವಾಳ, ಮಾ. 02, 2021 (ಕರಾವಳಿ ಟೈಮ್ಸ್) : ವ್ಯಕ್ತಿಯನ್ನು ನೆಲಕ್ಕೆ ದೂಡಿ ಹಾಕಿ, ಅವನ ಮೇಲೆ ಮತ್ತೆ ಕಲ್ಲು ಎತ್ತಿ ಹಾಕಿದಂತೆ ಬಿಜೆಪಿ ಸರಕಾರಗಳು ಜನರೊಂದಿಗೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಗುಡುಗಿದರು. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಸೋಮವಾರ ಬಿ ಸಿ ರೋಡಿನಲ್ಲಿ ನಡೆದ ಪಾದಯಾತ್ರೆ ಹಾಗೂ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ಸರಕಾರಗಳು ಜನರಿಗಾಗಿ ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಬಿಡಿ, ಕಾಂಗ್ರೆಸ್ ಸರಕಾರ ಹಮ್ಮಿಕೊಂಡ ಜನಪರ ಕಾರ್ಯಕ್ರಮಗಳನ್ನೂ ರದ್ದುಗೊಳಿಸುವ ಮೂಲಕ ಸಂಪೂರ್ಣ ಜನವಿರುದ್ದವಾಗಿ ಬಡವರ ಪಾಲಿಗೆ ಯಮರೂಪಿಯಾಗಿ ವರ್ತಿಸುತ್ತಿದೆ. ಕಾಂಗ್ರೆಸ್ ಸರಕಾರ ಬಡವರಿಗಾಗಿ ಬಿಪಿಎಲ್ ಪಡಿತರ ಚೀಟಿ ನೀಡಿ ಹೊಟ್ಟೆ ಹಸಿವು ತಣಿಸುವ ಕಾರ್ಯ ಮಾಡಿದರೆ, ಇದೀಗ ಬಿಜೆಪಿ ಸರಕಾರ ಬೇಕಾಬಿಟ್ಟಿ ಮಾನದಂಡ ವಿಧಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವುದು ಮಾತ್ರವಲ್ಲ ಅದರ ಮೇಲೆ ಮತ್ತೆ ದಂಡ ವಿಧಿಸುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರಕಾರಗಳು ಯಾವತ್ತೂ ಜನವಿರೋಧಿಯಾಗಿ ನಡೆದುಕೊಂಡಿಲ್ಲ. ಕಾಂಗ್ರೆಸ್ ಕಾರ್ಯಕ್ರಮಗಳೆಲ್ಲವೂ ಬಡ ಜನರ ಪೂರಕವಾಗಿತ್ತು. ಬಡ ಜನರನ್ನು ಮೀರಿ ಯಾರನ್ನೂ ಮೆಚ್ಚಿಸಲು ಹೋದ ಉದಾಹರಣೆಗಳೇ ಕಾಂಗ್ರೆಸ್ ಸರಕಾರಗಳಲ್ಲಿ ಇಲ್ಲ ಎಂದ ರಮಾನಾಥ ರೈ ಆದರೂ ಜನ ನರೇಂದ್ರ ಮೋದಿ ಅವರ ಬಣ್ಣದ ಮಾತುಗಳಿಗೆ ಬಲಿ ಬಿದ್ದು ಹದಿನೈದು ಲಕ್ಷದ ಅತಿಯಾಸೆಗೆ ಬಲಿ ಬಿದ್ದು ಅಧಿಕಾರ ನೀಡಿದರೆ ಮೋದಿ ಮಾತ್ರ ಮತ ಹಾಕಿದ ಬಡವರನ್ನು ನಿರ್ಲಕ್ಷಿಸಿ ಪ್ರಭಾವಿಗಳ ಹಿತ ಕಾಪಾಡುವ ಕಾರ್ಯಕ್ರಮಗಳನ್ನು ಮಾತ್ರ ಹಾಕಿಕೊಂಡು ಜನವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗುಡುಗಿದರು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಪರೀತ ಬೆಲೆ ಇರುವ ಸಂದರ್ಭ ಕಾಂಗ್ರೆಸ್ ಸರಕಾರಗಳು ಮಿತವಾಗಿ ಬೆಲೆ ಏರಿಕೆ ಮಾಡಿ ಪರಿಸ್ಥಿತಿ ನಿಭಾಯಿಸುತ್ತಿದ್ದ ಸಂದರ್ಭ ಆಕಾಶ ಕಳಚಿದಂತೆ ಬೊಬ್ಬೆ ಹಾಕುತ್ತಿದ್ದ ಬಿಜೆಪಿಗರು ಇದೀಗ ಪರಿಸ್ಥಿತಿ ಕೈ ಮೀರುತ್ತಿದ್ದರೂ ಮೌನ ಮುರಿಯುವ ಪರಿಸ್ಥಿತಿ ಇಲ್ಲ ಎಂದು ಅಣಕವಾಡಿದರು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಇನ್ನಷ್ಟು ದಾರಿದ್ರ್ಯ ಸನ್ನಿವೇಶ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಆತಂಕದಲ್ಲಿದ್ದಾರೆ. ಆದರೆ ಕೆಂದ್ರ ಸರಕಾರ ಮಾತ್ರ ದಿನದಿಂದ ದಿನಕ್ಕೆ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಮಗುಮ್ಮಾಗಿ ಮಲಗಿಕೊಂಡಿದೆ. ಜನ ಸಾಮಾನ್ಯರ ಕಷ್ಟ ತನ್ನ ಕಷ್ಟವಲ್ಲ ಎಂಬಂತೆ ವರ್ತಿಸುತ್ತಿದೆ. ಕೇಂದ್ರ ಸರಕಾರದ ಕ್ರಮದಿಂದ ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು. ಕೈಕಂಬ-ಪೊಳಲಿ ದ್ವಾರದ ಬಳಿಯಿಂದ ವಿಭಿನ್ನ ಶೈಲಿಯಲ್ಲಿ ಮೆರವಣಿಗೆ ಹೊರಟು ಬಂದ ಪ್ರತಿಭಟನಾಕಾರರು ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗದಲ್ಲಿ ಸಂಜೆಯವರೆಗೂ ಧರಣಿ ಕೂತರು. ಪ್ರತಿಭಟನಾಕಾರರು ಎತ್ತಿನ ಗಾಡಿ ಮೆರವಣಿಗೆ ನಡೆಸಿ, ಬಳಿಕ ಒಲೆ ಉರಿಸಿ ಅಡುಗೆ ಮಾಡುವ ಮೂಲಕ ಗಮನ ಸೆಳೆದರು. ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಲುಕ್ಮಾನ್ ಬಿ ಸಿ ರೋಡು, ಹಸೈನಾರ್ ತಾಳಿಪಡ್ಪು, ಲೋಲಾಕ್ಷ ಶೆಟ್ಟಿ, ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ, ಮುಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಪ್ರಮುಖರಾದ ಸುಧೀರ್ ಕುಮಾರ್ ಮರೋಳಿ, ಸದಾಶಿವ ಬಂಗೇರ, ಯೂಸುಫ್ ಕರಂದಾಡಿ, ಮುಹಮ್ಮದ್ ನಂದಾವರ, ಮಾಯಿಲಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ, ಬಿ ಕೆ ಇದ್ದಿನಬ್ಬ, ಪದ್ಮನಾಭ ರೈ, ಕರೀಂ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಆತಂಕದಲ್ಲಿದ್ದಾರೆ. ಆದರೆ ಕೆಂದ್ರ ಸರಕಾರ ಮಾತ್ರ ದಿನದಿಂದ ದಿನಕ್ಕೆ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಮಗುಮ್ಮಾಗಿ ಮಲಗಿಕೊಂಡಿದೆ. ಜನ ಸಾಮಾನ್ಯರ ಕಷ್ಟ ತನ್ನ ಕಷ್ಟವಲ್ಲ ಎಂಬಂತೆ ವರ್ತಿಸುತ್ತಿದೆ. ಕೇಂದ್ರ ಸರಕಾರದ ಕ್ರಮದಿಂದ ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು. ಕೈಕಂಬ-ಪೊಳಲಿ ದ್ವಾರದ ಬಳಿಯಿಂದ ವಿಭಿನ್ನ ಶೈಲಿಯಲ್ಲಿ ಮೆರವಣಿಗೆ ಹೊgಟು ಬಂದ ಪ್ರತಿಭಟನಾಕಾರರು ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗದಲ್ಲಿ ಸಂಜೆಯವರೆಗೂ ಧರಣಿ ಕೂತರು. ಪ್ರತಿಭಟನಾಕಾರರು ಎತ್ತಿನ ಗಾಡಿ ಮೆರವಣಿಗೆ ನಡೆಸಿ, ಬಳಿಕ ಒಲೆ ಉರಿಸಿ ಅಡುಗೆ ಮಾಡುವ ಮೂಲಕ ಗಮನ ಸೆಳೆದರು. ಮಾಜಿ ಸಚಿವ ರಮಾನಾಥ ರೈ ಕೇಂದ್ರ ಸರಕಾರದ ವಿರುಧ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಲುಕ್ಮಾನ್ ಬಿ ಸಿ ರೋಡು, ಹಸೈನಾರ್ ತಾಳಿಪಡ್ಪು, ಲೋಲಾಕ್ಷ ಶೆಟ್ಟಿ, ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ, ಮುಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಪ್ರಮುಖರಾದ ಸುಧೀರ್ ಕುಮಾರ್ ಮರೋಳಿ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ಮಾಯಿಲಪ್ಪ ಸಾಲ್ಯಾನ್, ಯೂಸುಫ್ ಕರಂದಾಡಿ, ವೆಂಕಪ್ಪ ಪೂಜಾರಿ, ಕರೀಂ ಬೊಳ್ಳಾಯಿ, ಬಿ ಕೆ ಇದ್ದಿನಬ್ಬ, ಪದ್ಮನಾಭ ರೈ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ದೂಡಿ ನೆಲಕ್ಕೆ ಬೀಳಿಸಿದ್ದು ಮಾತ್ರವಲ್ಲ, ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿದ ವರ್ತನೆ ಬಿಜೆಪಿ ಸರಕಾರದ್ದು : ರಮಾನಾಥ ರೈ ವಾಗ್ದಾಳಿ Rating: 5 Reviewed By: karavali Times
Scroll to Top