ಬಂಟ್ವಾಳ, ಮಾ. 04, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಮೆಲ್ಕಾರ್ ಸಮೀಪದ ಬೋಳಂಗಡಿ ನಿವಾಸಿ ದಿವಂಗತ ಅಬೂಬಕ್ಕರ್ ಪಿ.ಕೆ. ಅವರ ಪತ್ನಿ ಶ್ರೀಮತಿ ಖತೀಜಮ್ಮ (72) ಅವರು ಅನಾರೋಗ್ಯದಿಂದ ಗುರುವಾರ ಸಂಜೆ (ಮಾರ್ಚ್ 4, 2021) ಸ್ವಗೃಹದಲ್ಲಿ ನಿಧನರಾದರು.
ಇವರು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರ ಅಜ್ಜಿ (ತಾಯಿಯ ತಾಯಿ) ಆಗಿದ್ದು, ಮೃತರು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment