ಬಂಟ್ವಾಳ, ಮಾ. 29, 2021 (ಕರಾವಳಿ ಟೈಮ್ಸ್) : ಚಬಕ್ ಫ್ರೆಂಡ್ಸ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಲಡ್ಕ ಮೈದಾನದಲ್ಲಿ ಭಾನುವಾರ (ಮಾ 28) ನಡೆದ ನಿಗದಿತ ಓವರ್‍ಗಳ 11 ಜನರ ಜನರ ಕ್ರಿಕೆಟ್ ಪಂದ್ಯಾಟ ಆಲಡ್ಕ ಚಾಂಪಿಯನ್ಸ್ ಲೀಗ್ (ಎಸಿಎಲ್-2021) ಟೂರ್ನಿಯಲ್ಲೂ ಪ್ರಭುತ್ವ ಸಾಧಿಸಿದ ಹಕೀಂ ಉಲ್ಲಾಸ್ ಹಾಗೂ ಶರೀಫ್ ಭೂಯಾ ಮಾಲಕತ್ವದ, ಮುಹಮ್ಮದ್ ಕೈಫ್ ನಾಯಕತ್ವದ ಬೀಯಿಂಗ್ ಭೂಯಾ ತಂಡ ಪ್ರಶಸ್ತಿ ಗೆದ್ದುಕೊಂಡಿತು.
5 ತಂಡಗಳು ಭಾಗವಹಿಸಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೀಯಿಂಗ್ ಭೂಯಾ ತಂಡ ಮುಸ್ತಫಾ ಪಿ ಜೆ ಮಾಲಕತ್ವದ, ಸಾಬಿತ್ ನಾಯಕತ್ವದ ಪಿ ಜೆ ವಾರಿಯರ್ಸ್ ತಂಡವನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಬೀಯಿಂಗ್ ಭೂಯಾ ತಂಡದ ಮುಹಮ್ಮದ್ ಕೈಫ್ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಸಜ್ಜಾದ್ ಬೋಗೋಡಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದುಕೊಂಡರೆ, ಪಿ ಜೆ ಸ್ಟಾರ್ಸ್ ತಂಡ ಆಟಗಾರ ಅಸ್ತರ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು.
ಉದ್ಯಮಿಗಳಾದ ಅಬ್ದುಲ್ ಹಕೀಂ ಉಲ್ಲಾಸ್, ಝಕರಿಯಾ ಕತಾರ್, ಆಸಿಫ್ ಕತಾರ್, ಶರೀಫ್ ಭೂಯಾ, ಹನೀಫ್ ಭೂಯಾ, ಸಾದಿಕ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಕೂಟದಲ್ಲಿ ಸತ್ತಾರ್ ಮಾಲಕತ್ವದ ಚಬಕ್ ವಾರಿಯರ್ಸ್, ನಹೀಂ ಮಾಲಕತ್ವದ ಎನ್ ಬಿ ಸ್ಟ್ರೈಕರ್ಸ್, ಹಾಫಿಳ್ ಮಾಲಕತ್ವ ಟೀಂ ರಿಜಿಡ್ ತಂಡಗಳು ಭಾಗವಹಿಸಿತ್ತು. ಇತ್ತೀಚೆಗೆ ನಡೆದ ಸನ್ ಪ್ಯೂರ್ ಐಪಿಎಲ್ ಸೀಸನ್-5 ಟ್ರೋಫಿಯನ್ನೂ ಬೀಯಿಂಗ್ ಭೂಯಾ ತಂಡ ಗೆದ್ದುಕೊಂಡಿತ್ತು.
0 comments:
Post a Comment