ನವದೆಹಲಿ, ಮಾ. 31, 2021 (ಕರಾವಳಿ ಟೈಮ್ಸ್) : ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವ ಇಂದಿನ ಕೊನೆಯ ದಿನಾಂಕವನ್ನು ಕೊರೋನಾ ಕಾರಣದಿಂದ ಮತ್ತೆ ವಿಸ್ತರಿಸಿ ಕೇಂದ್ರ ವಿತ್ತ ಇಲಾಖೆ ಆದೇಶ ಹೊರಡಿಸಿದೆ. ಆಧಾರ್-ಪಾನ್ ಲಿಂಕ್ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ಸರಕಾರ ಆದೇಶಿಸಿದೆ.
ದೇಶದ ಪ್ರತಿಯೊಬ್ಬ ಭಾರತೀಯ ನಾಗರಿಕ ಕೂಡಾ ಸೆಕ್ಷನ್ 139ಎಎ ಪ್ರಕಾರ ತನ್ನ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಈ ಹಿಂದೆ ಆದೇಶ ಹೊರಡಿಸಿತ್ತು. ಸದ್ರಿ ಆದೇಶದಂತೆ ಕೊನೆ ದಿನಾಂಕ 2021 ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿತ್ತು. ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ 1,000/- ರೂಪಾಯಿ ದಂಡ ವಿಧಿಸುವ ಜೊತೆ ಪಾನ್ ಕಾರ್ಡ್ ಅಮಾನ್ಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿತ್ತು.
ಆದಾಯ ತೆರಿಗೆ ಇಲಾಖೆ ತಿಳಿಸಿರುವ ಪ್ರಕಾರ ಈಗಾಗಲೇ ಕೊಟ್ಟಿರುವ ಕಾಲಾವಕಾಶದ ಒಳಗಾಗಿ ಯಾರೂ ತಮ್ಮ ಪ್ಯಾನ್‍ಕಾರ್ಡಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದೆ ಇರುತ್ತಾರೋ ಅಂತವರಿಗೆ 1 ಸಾವಿರ ರೂಪಾಯಿ ದಂಡ ಹಾಕಿ ಅವರ ಪ್ಯಾನ್ ಕಾರ್ಡನ್ನು ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಘೋಷಿಸಿತ್ತು.
2021ನೇ ಹಣಕಾಸು ಮಸೂದೆಯಲ್ಲಿ ಹೊಸ ಸೆಕ್ಷನ್ 234ನ್ನು ಆದಾಯ ತೆರಿಗೆ ಕಾಯ್ದೆಯಾಗಿ ರೂಪುಗೊಳಿಸಲಾಗಿದ್ದು, ಇದರ ಪ್ರಕಾರ ಮಾರ್ಚ್ 31ರ ಒಳಗಾಗಿ ಪ್ಯಾನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡದೆ ಇದ್ದರೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಪ್ಯಾನ್ ಕಾರ್ಡ್ ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಇದೀಗ ಮತ್ತೆ 3 ತಿಂಗಳ ಕಾಲ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ವಿತ್ತ ಇಲಾಖೆ ವಿಸ್ತರಿಸಿದೆ.
0 comments:
Post a Comment