ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸಲು ಖ್ಯಾತನಾಮರಿಂದ ಕ್ರಿಕೆಟ್ : ಮಾ 5-21ರವರೆಗೆ ಲೆಜೆಂಡ್ ಕ್ರಿಕೆಟಿಗರ ಮುಖಾಮುಖಿ - Karavali Times ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸಲು ಖ್ಯಾತನಾಮರಿಂದ ಕ್ರಿಕೆಟ್ : ಮಾ 5-21ರವರೆಗೆ ಲೆಜೆಂಡ್ ಕ್ರಿಕೆಟಿಗರ ಮುಖಾಮುಖಿ - Karavali Times

728x90

2 March 2021

ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸಲು ಖ್ಯಾತನಾಮರಿಂದ ಕ್ರಿಕೆಟ್ : ಮಾ 5-21ರವರೆಗೆ ಲೆಜೆಂಡ್ ಕ್ರಿಕೆಟಿಗರ ಮುಖಾಮುಖಿ

ಭೋಪಾಲ್, ಫೆ. 03, 2021 (ಕರಾವಳಿ ಟೈಮ್ಸ್) : ರಸ್ತೆ ಸುರಕ್ಷೆಗಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಸರಣಿಗಾಗಿ ಇದೀಗ ವಿಶ್ವದ ಖ್ಯಾತನಾಮ ಕ್ರಿಕೆಟಿಗರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸಹಿತ ವಿಶ್ವದ ವಿವಿಧ ತಂಡಗಳಲ್ಲಿ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿ ನಿವೃತ್ತಿ ಪಡೆದ ಘಟಾನುಘಟಿ ಲೆಜೆಂಡ್ ಕ್ರಿಕೆಟಿಗರು ಇದೀಗ ಮತ್ತೆ ವಿಶೇಷ ಟೂರ್ನಿಯಲ್ಲಿ ತಮ್ಮ ದೇಶದ ಪರವಾಗಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯವು ವಿಶ್ವಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಸಂಚಾರದ ಕುರಿತು ಜಾಗರೂಕತೆ ಮತ್ತು ಅವರು ರಸ್ತೆಗಳಲ್ಲಿ ನಡೆಸುವ ವರ್ತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕ್ರಿಕೆಟಿಗರು ಸೇರಿ ಆಡುವ ಮೂಲಕ ಜನರಿಗೆ ಸುರಕ್ಷತೆಯ ಪಾಠ ಹೇಳಲು ಹೊರಟಿದ್ದಾರೆ. ಕಳೆದ ವರ್ಷ ಈ ಸರಣಿಯಲ್ಲಿ ಭಾಗವಹಿಸಲು ಹಲವು ದೇಶದ ಲೆಜೆಂಡ್ ಕ್ರಿಕೆಟರ್‍ಗಳು ಸಿದ್ಧವಾಗಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಸರಣಿ ರದ್ದಾಗಿತ್ತು. ಇದೀಗ 2021ರ ಮಾರ್ಚ್ 5 ರಿಂದ ಮಾರ್ಚ್ 21 ರವರೆಗೆ ಭಾರತದ ರಾಯಪುರ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವ ಹಿರಿಯ ದಾಂಡಿಗರು ಹಾಗೂ ದಾಳಿಗಾರರು ಮತ್ತೆ ಮೈದಾನಕ್ಕಿಳಿಯಲು ಸಿದ್ಧವಾಗುತ್ತಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯದಲ್ಲಿ ಭಾರತ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಂಜೆಡ್ಸ್, ಶ್ರೀಲಂಕಾ ಲೆಜೆಂಡ್ಸ್ ಹಾಗೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಈ 6 ತಂಡಗಳು ಭಾಗವಹಿಸಲಿದೆ. ನಿವೃತ್ತ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ ಸೇರಿದಂತೆ ಲೆಜೆಂಡ್ ಕ್ರಿಕೆಟಿಗರು ಮತ್ತೆ ಮೈದಾನದಲ್ಲಿ ಎದುರಾಳಿಗಳಾಗಿ ಸೆಣಸಾಡಲಿದ್ದಾರೆ. ಈ ಮೂಲಕ ನಿವೃತ್ತಿಯಾದ ಬಳಿಕ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಮತ್ತೆ ರಂಜಿಸಲು ಈ ಹಿರಿಯ ಆಟಗಾರರು ತಯಾರಾಗಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ರಸ್ತೆ ಸುರಕ್ಷೆ ಬಗ್ಗೆ ಅರಿವು ಮೂಡಿಸಲು ಖ್ಯಾತನಾಮರಿಂದ ಕ್ರಿಕೆಟ್ : ಮಾ 5-21ರವರೆಗೆ ಲೆಜೆಂಡ್ ಕ್ರಿಕೆಟಿಗರ ಮುಖಾಮುಖಿ Rating: 5 Reviewed By: karavali Times
Scroll to Top