ಕೊರೋನಾ 2ನೇ ಅಲೆ ವ್ಯಾಪಕ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಡೀಸಿ - Karavali Times ಕೊರೋನಾ 2ನೇ ಅಲೆ ವ್ಯಾಪಕ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಡೀಸಿ - Karavali Times

728x90

30 March 2021

ಕೊರೋನಾ 2ನೇ ಅಲೆ ವ್ಯಾಪಕ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಡೀಸಿ


ಮಂಗಳೂರು, ಮಾ. 30, 2021 (ಕರಾವಳಿ ಟೈಮ್ಸ್) : ಕೊರೋನಾ ರೂಪಾಂತರಿ ವೈರಸ್ ಅಲೆ ಜೋರಾಗಿರುವ ಹಿನ್ನಲೆಯಲ್ಲಿ ನಿಯಂತ್ರಣಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಜಿಲ್ಲೆಯಾದ್ಯಂತ ಸಿಆರ್‍ಪಿಸಿ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದು, ಎಲ್ಲಾ ರೀತಿಯ ಸಭೆ-ಸಮಾರಂಭಗಳಿಗೆ ನಿಷೇಧ ವಿಧಿಸಿದ್ದಾರೆ. 

ಜಿಲ್ಲಾಧಿಕಾರಿಯವರ ಮುಂದಿನ ಆದೇಶದವರೆಗೆ ಈ ನಿಷೇಧ ಆದೇಶ ಜಾರಿಯಲ್ಲಿರುತ್ತದೆ. ಪ್ರಸ್ತುತ ಆದೇಶದ ಪ್ರಕಾರ ಯುಗಾದಿ, ಹೋಳಿ, ಶಬೆ ಬರಾತ್, ಗುಡ್ ಫ್ರೈಡೆ ಮೊದಲಾದ ಹಬ್ಬಗಳು ಅಥವಾ ಸಮಾರಂಭಗಳನ್ನು ಸಾರ್ವಜನಿಕ ಸ್ಥಳಗಳು, ಮೈದಾನಗಳು, ಉದ್ಯಾನಗಳು, ಮಾರುಕಟ್ಟೆಗಳು ಅಥವಾ ಧಾರ್ಮಿಕ ಪ್ರದೇಶಗಳಲ್ಲಿ ನಡೆಸಬಾರದು ಎಂದಿದ್ದಾರೆ. 

ಜಾತ್ರೆಗಳು, ಮೆರವಣಿಗೆಗಳು, ಸಮಾವೇಶಗಳು, ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಂತಹ ಜನರು ಸೇರುವ ಸ್ಥಳಗಳಲ್ಲಿ ವೈರಸ್ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಇಂತಹ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಐದಕ್ಕಿಂತ ಹೆಚ್ಚು ಜನ ಒಂದೆಡೆ ಗುಂಪು ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ 2ನೇ ಅಲೆ ವ್ಯಾಪಕ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ ಡೀಸಿ Rating: 5 Reviewed By: karavali Times
Scroll to Top