ಬಂಟ್ವಾಳ, ಫೆ. 18, 2021 (ಕರಾವಳಿ ಟೈಮ್ಸ್) : ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಿ ಸಿ ರೋಡು-ಕೈಕಂಬದಲ್ಲಿ ಬುರ್ಖಾ ಮಳಿಗೆ ನಡೆಸುತ್ತಿದ್ದ ಉದ್ಯಮಿ, ಸ್ಥಳೀಯ ಪರ್ಲಿಯ ನಿವಾಸಿ ಅಬ್ದುಲ್ ರಹಿಮಾನ್ (40) ಅವರು ಗುರುವಾರ ಬೆಳಿಗ್ಗೆ ಅಂಗಡಿಯ ಮಹಡಿಯಲ್ಲೇ ಏಕಾಏಕಿ ನೇಣಿಗೆ ಶರಣಾಗಿದ್ದರೆ.
ಎಂದಿನಂತೆ ಗುರುವಾರ ಬೆಳಿಗ್ಗೆ ಕೂಡಾ ರಹಿಮಾನ್ ತನ್ನ ಎಳೆ ಪ್ರಾಯದ ಮಕ್ಕಳನ್ನು ಮದ್ರಸ ಹಾಗೂ ಶಾಲೆಗೆ ಬಿಟ್ಟು ಬಳಿಕ ಅಂಗಡಿಗೆ ಬಂದಿದ್ದರು. ಅಂಗಡಿಯಲ್ಲಿರುವಾಗಲೇ ಅಂಗಡಿಯ ಕೆಲಸದಾಕೆ ಯುವತಿಯ ಎದುರಲ್ಲೇ ಟೇಬಲ್ ಮೇಲೆ ತನ್ನ ಮೊಬೈಲ್ ಇಟ್ಟು ಮೇಲಂತಸ್ತಿನ ಕೋಣೆಗೆ ತೆರಳಿದ್ದು, ಮೊಬೈಲ್‍ಗೆ ಕರೆ ಬಂದರೆ ಸ್ವೀಕರಿಸಂತೆ ಹೇಳಿ ಹೋಗಿದ್ದಾರೆ ಎನ್ನಲಾಗಿದೆ.
ಕೆಲ ಕಾಲ ಕಳೆದರೂ ಮೇಲೆ ಹೋದವರು ಕೆಳಗೆ ಬರದ ಹಿನ್ನಲೆಯಲ್ಲಿ ಕೆಲಸದಾಕೆ ಯುವತಿ ಅಂಗಡಿಯ ಮೇಲಂತಸ್ತಿನ ಕೋಣೆಗೆ ತೆರಳಿ ನೋಡಿದಾಗ ರಹಿಮಾನ್ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಗೆ ಸ್ಪಷ್ಟವಾದ ಯಾವುದೇ ಕಾರಣ ತಿಳಿದು ಬಂದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಏರಿಳಿತ ಆಗಿರುವ ಕಾರಣಕ್ಕೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
18 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment