ಬಂಟ್ವಾಳ, ಫೆ. 10, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಾತನನ್ನು ತನ್ನ ಅಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಸಕಾಲಿಕ ಕ್ರಮ ಕೈಗೊಂಡು ಜೀವ ಉಳಿಸಿದ ಪ್ರಯತ್ನಕ್ಕಾಗಿ ನಂದಾವರ ನಿವಾಸಿ ಅಟೋ ಚಾಲಕ ಅನ್ವರ್ ಹುಸೈನ್ ಅವರನ್ನು ಪಣೋಲಿಬೈಲು ಕುಲಾಲ ಕುಂಬಾರರ ವೇದಿಕೆ ವತಿಯಿಂದ ಇಲ್ಲಿನ ಶ್ರೀಕೃಷ್ಣ ಭಜನಾ ಮಂದಿರಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರಾಜೆಯಲ್ಲಿ ಇತ್ತೀಚೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ದಯಾನಂದ ಎಂಬವರು ಗಾಳಿಯಲ್ಲಿ ಎಸೆಯಲ್ಪಟ್ಟು ಬಳಿಕ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕುಲಾಲ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅಟೋ ರಿಕ್ಷಾ ಚಲಾಯಿಸಿಕೊಂಡು ಅದೇ ದಾರಿಯಾಗಿ ಬರುತ್ತಿದ್ದ ಅನ್ವರ್ ಹುಸೈನ್ ನಂದಾವರ ಅವರು ಆತನನ್ನು ತನ್ನ ಅಟೋ ರಿಕ್ಷಾದಲ್ಲಿ ಹಾಕಿಕೊಂಡು ತುಂಬೆ ಬಿ ಎ ಆಸ್ಪತ್ರೆಗೆ ಸಾಗಿಸಿ ಸಕಾಲದಲ್ಲಿ ಸಿಕಿತ್ಸೆ ದೊರೆಯುವಂತೆ ಮಾಡಿ ಜೀವದಾನ ಮಾಡಿದ್ದರು. ಈ ಅಪಘಾತಕ್ಕೆ ಸಂಬಂಧಿಸಿದ ಸೀಸಿ ಟೀವಿ ವೀಡಿಯೋ ಫೂಟೋಜ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಅನ್ವರ್ ಹುಸೈನ್ ಅವರಿಗೆ ಪಣೋಲಿಬೈಲು ಕುಲಾಲ ಕುಂಬಾರರ ವೇದಿಕೆಯ ವತಿಯಿಂದ ಈ ಸನ್ಮಾನ ಮಾಡಲಾಗಿದೆ.
10 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment