ಬಂಟ್ವಾಳ, ಫೆ. 25, 2021 (ಕರಾವಳಿ ಟೈಮ್ಸ್) : ಎಲ್ಲಾ ಸಾಧನೆಗಳ ಮೂಲ ಪ್ರೇರಣೆ ಯೋಗ. ಯೋಗವೆಂದರೆ ಕೇವಲ ದೈಹಿಕ ಕಸರತ್ತು ಮಾತ್ರವಾಗಿರದೆ ಮನಸ್ಸಿನ ಮೇಲಿನ ಹಿಡಿತ ಕೂಡಾ ಆಗಿದೆ ಎಂದು ನೋಟರಿ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.
ಬಂಟ್ವಾಳ ಹಾಗೂ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಬಂಟ್ವಾಳ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ವಲಯ ಯೋಗ ಸ್ಫರ್ಧೆ ಉದ್ಘಾಟಿಸಿ ಮಾತನಾಡಿದರು. ಅವಿಶ್ಕಾರ್ ಯೋಗದ ಮುಖ್ಯಸ್ಥ ಕುಶಾಲಪ್ಪ ಗೌಡ ಮಾತನಾಡಿ ಯೋಗ ಎಂದು ವಿಶ್ವ ಮಾನ್ಯತೆ ಪಡೆದಿದ್ದು, ಎಲ್ಲಾ ವಯೋಮಾನದ, ವ್ಯಕ್ತಿಗಳ ಸರ್ವತೋಮುಖ ಬೆಳವಣಿಗೆಗೆ ಅನಿವಾರ್ಯವಾಗಿದೆ. ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಯೋಗ ಒಂದು ಉದ್ಯೋಗ ಆಯ್ಕೆಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲ ಡಾ ಸತೀಶ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರುಣಾಕರ್ ಹಾಗೂ ಸಂದೀಪ್ ವಿಶೇಷ ತಜ್ಞರಾಗಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿಯರಾದ ಡಾ ಅಪರ್ಣ ಆಳ್ವ ಹಾಗೂ ಶುಭ ಕೆ.ಎಚ್. ಕಾರ್ಯಕ್ರಮ ಆಯೋಜಿಸಿದ್ದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.
25 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment