ಮಂಗಳೂರು, ಫೆ. 14, 2021 (ಕರಾವಳಿ ಟೈಮ್ಸ್) : ಕರ್ನಾಟಕ ಟ್ವೆಕಾಂಡೋ ಅಕಾಡೆಮಿ (ರಿ) ಬೆಂಗಳೂರು ಇದರ ಆಶ್ರಯದಲ್ಲಿ ಕರ್ನಾಟಕ ಟ್ವೇಕಾಂಡೋ ಇದರ ಸಹಯೋಗದೊಂದಿಗೆ, ಮಂಗಳೂರು ಟ್ವೆಕಾಂಡೋ ಹಾಗೂ ಎಕ್ಸ್ಟ್ರೀಂ ಫಿಟ್ನೆಸ್ ಆಂಡ್ ಮಾರ್ಶಲ್ ಆಟ್ರ್ಸ್ ಫೈಟ್ ಕ್ಲಬ್ ಕೃಷ್ಣಾಪುರ ಇದರ ಸಹಕಾರದೊಂದಿಗೆ 3 ದಿನಗಳ ಟ್ವೆಕಾಂಡೋ, ಪೂಮ್ಸೆ, ಕ್ಯೂರೋಗಿ ಟೆಕ್ನಿಕಲ್ ಸೆಮಿನಾರ್ ಹಾಗೂ ಬೀಚ್ ಬಾಡಿ ಬೂಟ್ ಕ್ಯಾಂಪ್ ಕಾರ್ಯಕ್ರಮ ಫೆ 11 ರಿಂದ 13ರವರೆಗೆ ಕೃಷ್ಣಾಪುರ-ಚೊಕ್ಕಬೆಟ್ಟುವಿನ ಎಂಜೆಎಂ ಕಮ್ಯುನಿಟಿ ಸಭಾಂಗಣದಲ್ಲಿ ಹಾಗೂ ಸುರತ್ಕಲ್-ಇಡ್ಯಾ ಕಡಲ ಕಿನಾರೆಯಲ್ಲಿ ನಡೆಯಿತು.
ಒಲಿಂಪಿಕ್ ಕ್ವಾಲಿಫೈಡ್ ಏಶಿಯನ್ ಗೇಮ್ಸ್, ಸೌತ್ ಏಶಿಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಗೇಮ್ಸ್ ಕೋಚ್ ಮಾಸ್ಟರ್ ಬಿ.ಎಲ್.ಎನ್. ಮೂರ್ತಿ ಅವರು ಕ್ಯುರೊಗಿ ಸೆಮಿನಾರ್ ನಡೆಸಿಕೊಟ್ಟರು. ಅಂತಾರಾಷ್ಟ್ರಿಯ ಚಿನ್ನದ ಪದಕ ವಿಜೇತ ಪೂಮ್ಸೆ ಪಟು ಮಾಸ್ಟರ್ ರಾಕೇಶ್ ರಾಜು ಪೂಮ್ಸೆ ಸೆಮಿನಾರ್ ಪ್ರಸ್ತುಪಡಿಸಿದರು. ಬೀಚ್ ಬಾಡಿ ಬೂಟ್ ಕ್ಯಾಂಪ್‍ನೊಂದಿಗೆ ಮೂರು ದಿನಗಳ ಶಿಬಿರ ಸಮಾಪ್ತಿಯಾಯಿತು. ಗ್ಲೋಬಲ್ ಮಾಸ್ಟರ್ ಲೈಸೆನ್ಸ್ ಹೋಲ್ಡರ್ ಹರೀಶ್ ಎಚ್.ಎಂ., ಕರ್ನಾಟಕ ಟ್ವೇಕಾಂಡೋ ಕಾರ್ಯದರ್ಶಿ ಸಿ.ಜಿ. ಶಶಿವರ್ಧನ್ ಮೊದಲಾದವರು ಶಿಬಿರದ ನೇತೃತ್ವ ವಹಿಸಿದ್ದರು.
ಮುಖ್ಯ ಅಥಿಗಳಾಗಿ ಮಾಜಿ ಶಾಸಕ ಹಾಜಿ ಬಿ.ಎ. ಮೊಯ್ದಿನ್ ಬಾವ, ಪ್ರೀಚ್ ಪಬ್ಲಿಕ್ ಸ್ಕೂಲ್ ಟ್ರಸ್ಟಿ ಅಬ್ದುಲ್ ಅಝೀಝ್ ಟಿ., ಸೌದಿ ಅಲ್-ಜುಬೈಲ್ ಎಕ್ಸ್‍ಪರ್ಟೈಸ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ಕರ್ನಾಟಕ ಸೆಕ್ಯುರಿಟಿ ಸರ್ವೀಸಸ್ ಆಡಳಿತ ನಿರ್ದೇಶಕ ಶ್ಯಾಮರಾಯ ಸುವರ್ಣ, ರಿಯಾ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಇದರ ಆಡಳಿತ ನಿರ್ದೇಶಕ ಎಂ.ಎಚ್. ಸಯ್ಯಿದ್ ಅಹ್ಮದ್, ಅಬೂಬಕರ್ ಕುಳಾಯಿ, ಮಂಗಳೂರು ಟೇಕ್ವಾಂಡೋ ಮುಖ್ಯ ತರಬೇತುದಾರ ಇಸ್ಹಾಖ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
14 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment