ಬಂಟ್ವಾಳ, ಫೆ. 27, 2021 (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ನಿಗದಿತ ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 5ನೇ ಆವೃತ್ತಿಯ ಸನ್ ಪ್ಯೂರ್ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟ್ ಗೆ ಇಂದು ರಾತ್ರಿ (ಫೆ. 27 ಶನಿವಾರ ರಾತ್ರಿ) ಆಲಡ್ಕ ಮೈದಾನದಲ್ಲಿ ಅದ್ದೂರಿ ಚಾಲನೆ ದೊರೆಯಲಿದೆ.
ಲೋಕಲ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಬಂಟ್ವಾಳ ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಬಹುಶಃ ಜಿಲ್ಲೆಯಲ್ಲಿ ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಯುಪಿಎಲ್ ಟೂರ್ನಿ ಹೊರತುಪಡಿಸಿದರೆ ಎಪಿಎಲ್ 2ನೇ ಹೊನಲು ಬೆಳಕಿನ ಟೂರ್ನಿಯಾಗಿ ದಾಖಲಾಗಲಿದೆ.
ಶನಿವಾರ ಸಂಜೆ 7 ಗಂಟೆಗೆ ಟೂರ್ನಿಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಲಿದ್ದು, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಮಾಜಿ ಅಧ್ಯಕ್ಷ ಮಿಥುನ್ ರೈ, ಮಂಗಳೂರು ಮಯೂರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ನಿರ್ದೇಶಕ ಸುದೇಶ್ ಕುಮಾರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ, ಬಂಟ್ವಾಳ ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಹಸೈನಾರ್ ತಾಳಿಪಡ್ಪು, ಪಿ ರಾಮಕೃಷ್ಣ ಆಳ್ವ ಪೊನ್ನೋಡಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್, ಬಂಟ್ವಾಳ ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ ಪ್ರೀತಂ, ಉದ್ಯಮಿ ಕುಮುದಾ ಜೆ ಕುಡ್ವ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಪಿ.ಎಸ್. ಅಕ್ಕರಂಗಡಿ, ಡಿಸಿಸಿ ಕಾರ್ಯದರ್ಶಿ ಮುಹಮ್ಮದ್ ರಫೀಕ್ ತೌಫೀಕ್, ಉದ್ಯಮಿಗಳಾದ ಅಹ್ಮದ್ ಬಾವಾ ಯಾಸೀನ್, ಮುಹಮ್ಮದ್ ಹನೀಫ್ ಸಫಾ ಗೋಲ್ಡ್, ಅಬ್ದುಲ್ ರಹಿಮಾನ್ ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ರಫೀಕ್ ಎಂ.ಆರ್. ಬೋಗೋಡಿ, ಮುಸ್ತಫಾ ಬಿ. ಅಲ್-ಕೋಬರ್, ಇಸ್ಮಾಯಿಲ್ ಬಾವಾಜಿ, ಮುಹಮ್ಮದ್ ಹನೀಫ್ ಬಂಗ್ಲೆಗುಡ್ಡೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪತ್ರಕರ್ತರಾದ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಯು. ಮುಸ್ತಫಾ ಆಲಡ್ಕ ಮೊದಲಾದವರು ಭಾಗವಹಿಸಲಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೊಲೀಸ್ ಅಧಿಕಾರಿ ಟಿ ಡಿ ನಾಗರಾಜ್, ಕೋವಿಡ್ ವಾರಿಯರ್ಸ್ ಗಳಾದ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು, ಡಾ. ಎಂ.ಎಂ. ಶರೀಫ್ ಆಲಡ್ಕ, ಡಾ ರಾಜೇಂದ್ರ ಪಡಿಯಾರ್ ಪಾಣೆಮಂಗಳೂರು ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮ ಸಂಪೂರ್ಣವಾಗಿ ಅಭಿಮತ ಟಿವಿಯಲ್ಲಿ ಯೂಟ್ಯೂಬ್ ನೇರಪ್ರಸಾರಗೊಳ್ಳಲಿದೆ. ಫೆ. 28 ರ ಭಾನುವಾರ ರಾತ್ರಿ ಹೊನಲು ಬೆಳಕಿನಲ್ಲಿ ಹಾಗೂ ಮಾರ್ಚ್ 14 ರಂದು ಭಾನುವಾರ ಹಗಲು ಟೂರ್ನಿ ಸಾಗಿ ಬರಲಿದೆ ಎಂದು ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಬೋಗೋಡಿ ತಿಳಿಸಿದ್ದಾರೆ.
26 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment