ರಾಜ್ಯಾದ್ಯಂತ ಏಕಕಾಲದಲ್ಲಿ ಹಲವು ಉದ್ಯಮಿಗಳಿಗೆ ಐಟಿ ಶಾಕ್ : ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿ - Karavali Times ರಾಜ್ಯಾದ್ಯಂತ ಏಕಕಾಲದಲ್ಲಿ ಹಲವು ಉದ್ಯಮಿಗಳಿಗೆ ಐಟಿ ಶಾಕ್ : ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿ - Karavali Times

728x90

17 February 2021

ರಾಜ್ಯಾದ್ಯಂತ ಏಕಕಾಲದಲ್ಲಿ ಹಲವು ಉದ್ಯಮಿಗಳಿಗೆ ಐಟಿ ಶಾಕ್ : ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿ

ಬೆಂಗಳೂರು, ಫೆ. 17, 2021 (ಕರಾವಳಿ ಟೈಮ್ಸ್) : ರಾಜಧಾನಿ ಸೇರಿದಂತೆ ರಾಜ್ಯದ ಹಲವು ಕಡೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ಭರ್ಜರಿ ದಾಳಿ ಸಂಘಟಿಸಿ ಪ್ರತಿಷ್ಠಿತ ಉದ್ಯಮಿಗಳ ನಿದ್ದೆಗೆಡಿಸಿದ್ದಾರೆ. ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಉದ್ಯಮಿಗಳ ಕಚೇರಿಗಳ ಮೇಲೂ ಐಟಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ಕುಂಬಳಗೊಡಿನ ಬಿಜಿಎಸ್ ಶಿಕ್ಷಣ ಸಂಸ್ಥೆ, ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು, ತುಮಕೂರಿನ ಶ್ರೀದೇವಿ ಕಾಲೇಜು, ಮಂಗಳೂರಿನ ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿನ ದಾಖಲೆಗಳು, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಗಳೂರಿನಲ್ಲಿ ಎ ಜೆ ಶೆಟ್ಟಿ ಅವರ ಬೆಂದೂರ್‍ವೆಲ್‍ನಲ್ಲಿರುವ ನಿವಾಸದ ಮೇಲೆ, ಎ ಜೆ ಆಸ್ಪತ್ರೆ, ಯೆನೆಪೆÇೀಯ ಆಸ್ಪತ್ರೆ ಮೇಲೆ ದಾಳಿ ನಡೆದಿದೆ. ಶ್ರೀನಿವಾಸ ಮೆಡಿಕಲ್ ಕಾಲೇಜು, ಕಣಚೂರು ಆಸ್ಪತ್ರೆ ಮೇಲೆ ಕೂಡ ದಾಳಿ ನಡೆದಿದೆ. ಮಾಜಿ ಶಾಸಕ, ಬಿಜೆಪಿ ಮುಖಂಡ ಡಾ ಎಂ ಆರ್ ಹುಲಿನಾಯ್ಕರ್ ಅವರಿಗೆ ಸೇರಿದ ತುಮಕೂರು ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಮೇಲೂ ಐಟಿ ಅಧಿಕಾರಿಗಳು ದಾಳಿ ಸಂಘಟಿಸಿದ್ದಾರೆ. 60 ಇನ್ನೊವಾ ಕಾರುಗಳಲ್ಲಿ ಐಟಿ ಅಧಿಕಾರಿಗಳು ಆಗಮಿಸಿದ್ದು, ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ, ಕಪ್ಪು ಹಣ ಸಂಗ್ರಹ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟಿಗಾಗಿ ಲಕಾಂತರ ರೂಪಾಯಿ ವಹಿವಾಟು ನಡೆಸುವುದಲ್ಲದೆ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಚಿಕಿತ್ಸೆ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಪಡೆದು ಸರಕಾರಕ್ಕೆ ಸಮಪರ್ಕವಾದ ಆದಾಯ ತೆರಿಗೆ ವಿವರ ನೀಡುತ್ತಿಲ್ಲ, ತೆರಿಗೆಯನ್ನೂ ಸರಿಯಾಗಿ ಪಾವತಿಸುತ್ತಿಲ್ಲ ಎಂಬ ಸಾರ್ವಜನಿಕ ಆರೋಪ ಹಾಗೂ ದೂರಿನ ಹಿನ್ನಲೆಯಲ್ಲಿ ಈ ಎಲ್ಲಾ ದಾಳಿಗಳನ್ನು ಅಧಿಕಾರಿಗಳು ಸಂಘಟಿಸಿದ್ದಾರೆ ಎನ್ನಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯಾದ್ಯಂತ ಏಕಕಾಲದಲ್ಲಿ ಹಲವು ಉದ್ಯಮಿಗಳಿಗೆ ಐಟಿ ಶಾಕ್ : ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿ Rating: 5 Reviewed By: karavali Times
Scroll to Top