ಬೆಂಗಳೂರು, ಫೆ. 15, 2021 (ಕರಾವಳಿ ಟೈಮ್ಸ್) : ಬಡವರ ಪಡಿತರ ಚೀಟಿ ನಿಯಮದ ಬಗ್ಗೆ ಏಕಾಏಕಿ ಸರ್ವಾಧಿಕಾರಿ ನಿಯಮ ಪ್ರಕಟಿಸಿದ ರಾಜ್ಯ ಆಹಾರ ಇಲಾಖಾ ಸಚಿವ ಉಮೇಶ್ ಕತ್ತಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಸಚಿವ ಉಮೇಶ್ ಕತ್ತಿಯವರೇ, ನಿಮ್ಮದೇ ಒಂದು ರಾಜ್ಯ ಕಟ್ಟಿ ನೀವೇ ಮುಖ್ಯಮಂತ್ರಿಗಳಾದಾಗ ಇಂತಹ ತುಘಲಕ್ ದರ್ಬಾರ್ ನಡೆಸಿ. ಈಗ ಕಷ್ಟಪಟ್ಟು ಗಳಿಸಿರುವ ಮಂತ್ರಿಸ್ಥಾನದಲ್ಲಿ ಕೂತು ಜನತೆಗೆ ಒಳ್ಳೆಯದನ್ನು ಮಾಡಿ. ನಿಮ್ಮ ಅಧಿಕ ಪ್ರಸಂಗತನದ ವಿರುದ್ಧ ಜನ ರೊಚ್ಚಿಗೆದ್ದು ಕತ್ತಿ ಬೀಸಿದರೆ ಇದ್ದ ಕುರ್ಚಿಯೂ ಬಿಡಬೇಕಾದೀತು." ಎಂದು ತೀವ್ರ ಗರಂ ಆಗಿಯೇ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಕತ್ತಿ, ಟಿ ವಿ, ಫ್ರಿಡ್ಜ್ ಹಾಗೂ ಬೈಕ್ ಹೊಂದಿದವರು ಬಿಪಿಎಲ್ ಪಡಿತರ ಚೀಟಿಗೆ ಅನರ್ಹರು. ಇವುಗಳನ್ನು ಹೊಂದಿದವರು ಬಿಪಿಎಲ್ ಪಡಿತರ ಚೀಟಿ ಹೊಂದಿದರೆ ಮಾರ್ಚ್ ಒಳಗೆ ಅದನ್ನು ಹಿಂತಿರುಗಿಸಿ. ತಪ್ಪಿದಲ್ಲಿ ದಂಡದ ಜೊತೆ ಕಾನೂನು ಕ್ರಮವನ್ನೂ ಎದುರಿಸಿ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಸಚಿವರ ಈ ಹೇಳಿಕೆ ಬಗ್ಗೆ ಸ್ವತಃ ಸರಕಾರದ ಇತರ ಸಚಿವರು, ಶಾಸಕರು ಹಾಗೂ ಬಿಜೆಪಿ ಪಕ್ಷದೊಳಗೆ ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಯೂ ಟರ್ನ್ ಹೊಡೆದ ಸಚಿವರು ಪಡಿತರ ಚೀಟಿ ನಿಯಮಾವಳಿ ಹಿಂದಿನಂತೆಯೇ ಇರಲಿದೆ ಎಂದಿದ್ದರು.
15 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment