ಸುಳ್ಯ : ಸಮ್ಯಕ್ತ್ ಜೈನ್ ಗೆ ರಾಜ್ಯ ಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ - Karavali Times ಸುಳ್ಯ : ಸಮ್ಯಕ್ತ್ ಜೈನ್ ಗೆ ರಾಜ್ಯ ಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ - Karavali Times

728x90

14 February 2021

ಸುಳ್ಯ : ಸಮ್ಯಕ್ತ್ ಜೈನ್ ಗೆ ರಾಜ್ಯ ಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಸುಳ್ಯ, ಫೆ. 14, 2021 (ಕರಾವಳಿ ಟೈಮ್ಸ್) : ಇಲ್ಲಿನ ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಹಾಗೂ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಸುಳ್ಯ ಎಪಿಎಂಸಿ ಸಭಾಭವನದಲ್ಲಿ ನಡೆದ ಕವಿ ಸಂಗಮ-ಕವಿ ಸಂಭ್ರಮ ಕಾರ್ಯಕ್ರಮದಲ್ಲಿ 2021ನೇ ಸಾಲಿನ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿಯನ್ನು ಉದಯೋನ್ಮುಖ ಯುವ ಸಾಹಿತಿ ಸಮ್ಯಕ್ತ್ ಜೈನ್ ಅವರಿಗೆ ಹಲವು ಮಂದಿ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ, ಹರಿನರಸಿಂಹ ಉಪಾಧ್ಯಾಯ, ಮಹಾಂತಪ್ಪ ಮೇಟಿ ಗೌಡ ರಾಯಚೂರು, ಗುರುಢವಳೇಶ್ವರ ಹುಬ್ಬಳ್ಳಿ, ಭೀಮರಾವ್, ಸಾನು ಉಬರಡ್ಕ, ಸುಮಾ ಕಿರಣ್ ಉಡುಪಿ, ಆಶಮಯ್ಯ ಪುತ್ತೂರು, ಅನುರಾಧಾ ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಕಿರಿ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕದಲ್ಲಿ ಹಲವಾರು ಗೌರವ ಪ್ರಶಸ್ತಿಗಳು, ಸನ್ಮಾನಗಳಿಗೆ ಭಾಜನರಾಗಿರುವ ಸಮ್ಯಕ್ತ್ ಜೈನ್ ಅವರು ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ-ಮಂಜುಳಾ ದಂಪತಿಯ ಪುತ್ರ.
  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಸಮ್ಯಕ್ತ್ ಜೈನ್ ಗೆ ರಾಜ್ಯ ಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ Rating: 5 Reviewed By: karavali Times
Scroll to Top